ನಟ ದರ್ಶನ್  ಸೇರಿ ಆರು ಆರೋಪಿಗಳ ಜಾಮೀನು ರದ್ದು: ಸುಪ್ರೀಂ ತೀರ್ಪು

ನವದೆಹಲಿ,ಆಗಸ್ಟ್,14,2025 (www.justkannada.in): ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಬಿಗ್ ಶಾಕ್. ದರ್ಶನ್ ಸೇರಿ ಸೇರಿ 7 ಆರೋಪಿಗಳ ಜಾಮೀನು  ರದ್ದುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು  ನೀಡಿದೆ.

ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು  ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಜಾಮೀನು ರದ್ದುಗೊಳಿಸುವಂತೆ ಮನವಿ ಮಾಡಿತ್ತು.

ಈ  ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾ.ಜೆ.ಬಿ ಪರ್ದಿವಾಲಾ ಹಾಗೂ ನ್ಯಾ.ಆರ್.ಮಹದೇವನ್ ಅವರ ಪೀಠವು ವಾದ ಪ್ರತಿವಾದ ಆಲಿಸಿ ತೀರ್ಪನ್ನ ಕಾಯ್ದಿರಿಸಿತ್ತು. ಇದೀಗ ಇಂದು ತೀರ್ಪು ಪ್ರಕಟವಾಗಿದ್ದು ನಟ ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದುಗೊಳಿಸಿ ಆದೇಶಿಸಿದೆ. ಎ1 ಪವಿತ್ರಾಗೌಡ, ಎ2 ನಟ ದರ್ಶನ್,  ಎ 11 ನಾಗರಾಜು ಅಲಿಯಾಸ್ ನಾಗ ಎ12 ಲಕ್ಷ್ಮಣ್  ಎ7 ಅನುಕುಮಾರ್,  ಎ6 ಜಗದೀಶ್  ಜಾಮೀನು ರದ್ದಾಗಿದೆ.

ಸಾಕ್ಷ್ಯ ವಿಚಾರಣೆ ಶೀಘ್ರವಾಗಿ ನಡೆಸಲು  ನ್ಯಾಯಪೀಠ ಸೂಚನೆ ನೀಡಿದೆ. ಹೈಕೋರ್ಟ್  ಆದೇಶಗಳ ಲೋಪಗಳನ್ನ ಎತ್ತಿ ತೋರಿಸಿದ ಸುಪ್ರೀಂಕೋರ್ಟ್   ಆರೋಪಿ ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್ ಮೆಂಟ್ ನೀಡಲಾಗಿದೆ.  ಜೈಲು ಸೂಪರಿಟೆಂಡೆಂಟ್ ಅನ್ನು ಸಸ್ಪೆಂಡ್ ಮಾಡಬೇಕಿತ್ತು ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಜಾಮೀನು ರದ್ದು ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿ 6 ಆರೋಪಿಗಳು ಜೈಲು ಸೇರಲಿದ್ದಾರೆ

Key words: Supreme Court, cancels, actor Darshan, bail