ಮೈಸೂರು,ಫೆಬ್ರವರಿ,05,2021(www.justkannada.in): ಶ್ರೀರಾಮನನ್ನು ಕುಡುಕ ಎಂದು ಕರೆಯುವ ನೀವು ಕುಡುಕರಲ್ಲವೆ?, ನೀವು ಮಧ್ಯಪಾನ ಮಾಡುವುದಿಲ್ಲವೆ? ಸ್ವತಃ ಕುಡುಕರಾದ ನೀವು, ಶ್ರೀರಾಮನನ್ನು ಕುಡುಕ ಎಂದು ಹೇಳುವ ನೈತಿಕತೆ ನಿಮಗಿದೆಯೇ? ಈ ಪ್ರಶ್ನೆಗಳಿಗೆ ಕೆ.ಎಸ್.ಭಗವಾನ್ ರಿಂದ ಉತ್ತರ ಪಡೆದುಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಅಶಾಂತಿ ಉಂಟು ಮಾಡದಂತೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ನೀವು ಮತ್ತು ನಿಮ್ಮ ಕುಟುಂಬ ಯಾವ ಧರ್ಮಕ್ಕೆ ಸೇರಿದವರು? ನಿಮ್ಮ ಮತ್ತು ಕುಟುಂಬದವರ ಶೈಕ್ಷಣಿಕ ದಾಖಲೆಗಳಲ್ಲಿ ಯಾವ ಧರ್ಮವನ್ನು ಉಲ್ಲೇಖಿಸಲಾಗಿದೆ? ಸದರಿ ಶೈಕ್ಷಣಿಕ ದಾಖಲೆಗಳನ್ನು ನೀಡಿ ಎಂದು ಪ್ರಶ್ನಿಸಿದ್ದಾರೆ.
ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಜನ ಸಾಮಾನ್ಯರು ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುವಾಗ, ಸದರಿ ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡದ ಮತ್ತು ಹೋರಾಟ ಮಾಡದ ನೀವು ಬರಿ ಹಿಂದೂ ಧರ್ಮ ಮತ್ತು ಹಿಂದೂ ಧರ್ಮದ ದೇವರುಗಳ ಬಗ್ಗೆ ಮಾತ್ರ ಮಾತನಾಡುವುದು, ಹೋರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಮತ್ತು ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದೇ ನಿಮ್ಮ ಜೀವನದ ಗುರಿಯಾಗಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ಮತ್ತು ದಾಖಲಾತಿಗಳನ್ನು ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆ ನೀಡಿರುವ ಉಚಿತ ಪೊಲೀಸ್ ರಕ್ಷಣೆಯನ್ನು ಹಿಂದಕ್ಕೆ ಪಡೆಯಬೇಕು ಅಥವಾ ನಿಯಮದ ಪ್ರಕಾರ ಶುಲ್ಕವನ್ನು ಪಾವತಿ ಮಾಡಿಸಿಕೊಳ್ಳಬೇಕು ಎಂದು ಪತ್ರದ ಮೂಲಕ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ.
key words : Calling-Sriraman-drunkard-not-bagavan-drunkard?- RTI-activist-Snehamayi Krishna