ನಾಳೆ ಸಂಜೆಯೊಳಗೆ ಸಚಿವ ಸಂಪುಟ ರಚನೆ ಬಗ್ಗೆ ತೀರ್ಮಾನವಾಗುತ್ತೆ- ಶಾಸಕ ಶ್ರೀರಾಮುಲು ಹೇಳಿಕೆ…

ಬೆಂಗಳೂರು,ಆ,15,2019(www.justkannada.in): ನೂರಕ್ಕೆ ನೂರರಷ್ಟು ನಾಳೆ ಸಂಜೆಯೊಳಗೆ ಸಚಿವ ಸಂಪುಟ ರಚನೆ ಬಗ್ಗೆ ತೀರ್ಮಾನವಾಗುತ್ತದೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಶಾಸಕ ಶ್ರೀರಾಮುಲು, ಸಿಎಂ ಬಿಎಸ್ ಯಡಿಯೂರಪ್ಪ ಇಂದು ದೆಹಲಿಗೆ ತೆರಳುತ್ತಾರೆ. ನಾಳೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾರನ್ನ ಭೇಟಿಯಾಗಲಿದ್ದಾರೆ. ನೆರೆ ಹಾವಳಿ, ಪ್ರವಾಹದ ಬಗ್ಗೆ ಚರ್ಚೆ ನಡೆಸಿ ಕೇಂದ್ರದಿಂದ ಸಹಾಯ ಪಡೆದು ಬರಲಿದ್ದಾರೆ ಎಂದರು.

ಹಾಗೆಯೇ ಅಮಿತ್ ಶಾ ಭೇಟಿ ವೇಳೆ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಾಳೆಯೊಳಗೆ ಈ ಬಗ್ಗೆ ಅಂತಿಮವಾಗುತ್ತದೆ. ಮೊದಲ ಹಂತದಲ್ಲಿ ಎಷ್ಟು ಜನ ಸಚಿವರಾಗುತ್ತಾರೆ ಎಂಬ ಮಾಹಿತಿ ಇಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷರ  ಸೂಚನೆಯಂತೆ ಮುಂದುವರೆಯಬೇಕಿದೆ ಎಂದು ಶ್ರೀರಾಮುಲು ತಿಳಿಸಿದರು.

ಹಾಗೆಯೇ ಫೋನ್ ಟ್ಯಾಪಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ತನಿಖೆ ನಡೆದರೇ ಸತ್ಯಾಂಶ ಹೊರಬರುತ್ತದೆ. ಹೀಗಾಗಿ ನಾನೂ ಸಹ ತನಿಖೆಗೆ ಆಗ್ರಹಿಸುತ್ತೇನೆ. ಪೋನ್ ಟ್ಯಾಪಿಂಗ್ ನಲ್ಲಿ  ನನ್ನ ಹೆಸರಿತ್ತು. ರಾಜಕೀಯ ಉದ್ದೇಶದಿಂದ ಫೋನ್ ಟ್ಯಾಪಿಂಗ್ ಮಾಡಿರಬಹುದು. ಸಿಎಂ ಬಿಎಸ್ ವೈ ದೆಹಲಿಯಿಂದ ಬಂದ ಬಳಿಕ ತನಿಖೆ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು.

Key words:  Cabinet -will be-finalized- tomorrow -MLA Shriramulu.