ಪೂರ್ತಿ ಸಚಿವ ಸಂಪುಟ ಪುನರಚನೆಗೆ ಎಂಎಲ್ ಸಿ ಹೆಚ್.ವಿಶ್ವನಾಥ್ ಆಗ್ರಹ.

ಬೆಂಗಳೂರು,ಫೆಬ್ರವರಿ,2,2022(www.justkannada.in): ರಾಜ್ಯಸಚಿವ ಸಂಪುಟದಲ್ಲಿ ಸೋಮಾರಿ ಮಂತ್ರಿಗಳಿದ್ದಾರೆ.  ಹೀಗಾಗಿ ಸಚಿವ ಸಂಪುಟ ಪುನರಚನೆ ಮಾಡಬೇಕು ಎಂದು ಎಂಎಲ್ ಸಿ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್, ಸಚಿವರು ತಮ್ಮ ಕ್ಷೇತ್ರವೇ ವಿಧಾನಸೌಧವೆಂದು ತಿಳಿದು  ಮಲಗಿಬಿಟ್ಟಿದ್ದಾರೆ. ಸಚಿವರಿಗೆ ರಾಜ್ಯ ಪ್ರವಾಸ ಮಾಡಿ ಅಂದ್ರೆ ಕ್ಷೇತ್ರದಲ್ಲೇ ಇದ್ದಾರೆ. ಈ ಬಾರಿ ಹಿರಿಯರ ಬದಲಿಗೆ ಯುವಕರಿಗೆ ಆದ್ಯತೆ ನೀಡಲಿ ಎಂದರು.

ಇನ್ನೂ ಒಂದು ವರ್ಷ 2 ತಿಂಗಳ ಕಾಲ ಇದೆ. ಸಚಿವ ಸಂಪುಟ ವಿಸ್ತರಣೆ ಮಾಡಿದ್ರೆ ನಾಲ್ಕು ಜನ ಮಾತ್ರ ಹೋಗ್ತಾರೆ. ಪೂರ್ತಿ ಸಂಪುಟ ಪುನರಚನೆ ಮಾಡಬೇಕು. ರಾಜ್ಯದ ಅಭಿವೃದ್ಧಿಗೆ ಬದಲಾಗಬೇಕು ಎಂದು ಎಂಎಲ್ ಸಿ ಹೆಚ್.ವಿಶ್ವನಾಥ್ ತಿಳಿಸಿದರು.

Key words: cabinet-Restructure-MLC-H.Vishwanath