ಕೇಂದ್ರ ಸಚಿವ ಸಂಪುಟ ಪುನಾರಚನೆ: ರಾಜ್ಯದ ಸಂಸದರಿಗೆ ಸಚಿವ ಸ್ಥಾನದ ಕನಸು!

ಬೆಂಗಳೂರು, ಜೂನ್ 13, 2021 (www.justkannada.in): ಕೇಂದ್ರ ಸಚಿವ ಸಂಪುಟದ ಪುನಾರಚನೆ ಸುತ್ತಲಿನ ಚರ್ಚೆಗಳ ನಂತರ ರಾಜ್ಯದ ಸಂಸದರಲ್ಲೂ ಸಚಿವ ಸ್ಥಾನದ ಕನಸಿನ ರೆಕ್ಕೆ ಬೆಳೆಯತೊಡಗಿದೆ.

ರಾಜ್ಯ ಬಿಜೆಪಿಯ ಕೆಲ ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದೆನ್ನುವ ಮಾತುಗಳು ರಾಜಕೀಯ ಅಖಾಡದಲ್ಲಿ ಹಬ್ಬಿದೆ.

ಲಿಂಗಾಯತ ಸಮುದಾಯದ ಇಬ್ಬರು ಬಿಜೆಪಿ ಸಂಸದರ ಹೆಸರುಗಳು ಮುಂಚೂಣಿಯಲ್ಲಿದ್ದರೆ ಪಕ್ಷದ ಹಿರಿಯ ಮುಖಂಡರು ಲಿಂಗಾಯತೇತರ ಸಂಸದರೂ ಸಂಪುಟ ಸೇರ್ಪಡೆಯಾಗಬಹುದು ಎನ್ನಲಾಗಿದೆ.

ಕರ್ನಾಟಕದ 28 ಸಂಸದರಲ್ಲಿ 25 ಮಂದಿ ಬಿಜೆಪಿಯವರು. ರೈಲ್ವೆ ಕಾತೆ ರಾಜ್ಯ ಸಚಿವರಾಗಿದ್ದ , ಸುರೇಶ್ ಅಂಗಡಿ ಅವರ ನಿಧನದ ನಂತರ, ಅವರ ಪತ್ನಿ ಮಂಗಳಾ ಅವರು ಬೆಳಗಾವಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ.

ಬಾಗಲಕೋಟೆ ನಾಲ್ಕು ಬಾರಿಯ ಸಂಸದ, ಪಿ ಸಿ ಗದ್ದಿ ಗೌಡರ್ ಹಾಗೂ ಹಾವೇರುಯ ಶಿವಕುಮಾರ್ ಸಿ ಉದಾಸಿ ಅವರ ಹೆಸರುಗಳು ಪ್ರಸ್ತುತ ಸಂಪುಟ ಸೇರ್ಪಡೆ ಸುದ್ದಿ ಚಾಲ್ತಿಯಲ್ಲಿದೆ.