ನಾಳೆ ಸಚಿವ ಸಂಪುಟ ಸಭೆ: ಪ್ರಮುಖ ಸಚಿವರು ಗೈರು ಸಾಧ್ಯತೆ…

kannada t-shirts

ಬೆಂಗಳೂರು,ನವೆಂಬರ್,26,2020(www.justkannada.in)  ನಾಳೆ ರಾಜ್ಯ  ಸಚಿವ ಸಂಪುಟ  ನಡೆಯಲಿದ್ದು, ಆದರೆ ಈ ಸಭೆಗೆ ಪ್ರಮುಖ ಸಚಿವರೇ ಗೈರಾಗುವ ಸಾಧ್ಯತೆ ಇದೆ.

ಹೌದು, ವಿಧಾನಸೌಧದಲ್ಲಿ ನಾಳೆ ಬೆಳಿಗ್ಗೆ 10-30ಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ, ಈ ಸಭೆಗೆ ಸಚಿವರಾದ ಆರ್. ಅಶೋಕ್, ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆ.ಎಸ್.ಈಶ್ವರಪ್ಪ ಗೈರಾಗುತ್ತಿದ್ದಾರೆ ಎನ್ನಲಾಗಿದೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತನ್ನ ಆಪ್ತರಿಗೆ ಸಚಿವ ಸ್ಥಾನ ಕೊಡಿಸುವ ಸಲುವಾಗಿ ಹಲವು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೀಗಾಗಿ ನಾಳಿನ ಸಚಿವ ಸಂಪುಟ ಸಭೆಯಲ್ಲಿ ಹಾಜರಿರುವುದಿಲ್ಲ. ಇನ್ನು ಸಚಿವ ಆರ್. ಅಶೋಕ್ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಕಚೇರಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಇವರು ಸಹ ಸಂಪುಟ ಸಭೆಗೆ ಗೈರಾಗಲಿದ್ದಾರೆ ಎನ್ನಲಾಗಿದೆ.cabinet-meeting-tomorrow-ministers-likely-absent

ಇನ್ನು ಹೈದರಾಬಾದ್ ಪಾಲಿಕೆ ಚುನಾವಣೆ ವಿಚಾರವಾಗಿ  ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೈದರಾಬಾದ್ ಗೆ ತೆರಳುತ್ತಿದ್ದು, ಸಂಪುಟ ಸಭೆಯಲ್ಲಿ ಭಾಗಿಯಾಗಲ್ಲ ಎಂದಿದ್ದಾರೆ. ಒಟ್ಟಾರೆ ಸಂಪುಟ ಸಭೆಗೆ ಹಿರಿಯ ಸಚಿವರೇ ಗೈರಾಗುತ್ತಿರುವುದು ಬಿಜೆಪಿಯಲ್ಲಿ ಹಲವು ಕುತೂಹಲಕ್ಕೆ ಕಾರಣವಾಗಿದೆ.

Key words: Cabinet –meeting- tomorrow- ministers – likely – absent.

website developers in mysore