ಬೆಂಗಳೂರು ಗ್ರಾಮಾಂತರ, ಜುಲೈ,1,2025 (www.justkannada.in): ಜುಲೈ 02 ರಂದು ಅಂದರೆ ನಾಳೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ 2025ನೇ ಸಾಲಿನ 14ನೇ ಸಚಿವ ಸಂಪುಟ ಸಭೆ ನಡೆಯಲಿದೆ.
ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇವನಹಳ್ಳಿ ಟೌನ್ ರಾಣಿ ಸರ್ಕಲ್ನಿಂದ ಜಿಲ್ಲಾ ವ್ಯಾಪ್ತಿಗೆ ಒಳಪಡುವ ನಂದಿಬೆಟ್ಟದ ತಪ್ಪಲಿನ ಪ್ರದೇಶದವರೆಗೂ ವಾಹನಗಳ ನಿರ್ಭಂದನೆ ಹಾಗೂ ರಸ್ತೆ ಬದಿ ವ್ಯಾಪಾರ ವಹಿವಾಟನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಆದೇಶಿಸಿದ್ದಾರೆ.
Key words: Cabinet meeting, tomorrow, vehicle, restrictions, Nandi giridham