ಬೆಂಗಳೂರು,ಮೇ,22,2025 (www.justkannada.in): ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾಹಿತಿ ನೀಡಿದರು.
ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಾನೂನು ಸಚಿವರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಸಾಥ್ ನೀಡಿದರು. ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದಕೊಟ್ಟ ಭಾನುಮುಷ್ತಾಕ್ ಹಾಗೂ ದೀಪಾ ಬಸ್ತಿ ಅವರನ್ನ ಅಭಿನಂಧಿಸಿದ ಸಂಪುಟ ನಿರ್ಣಯವನ್ನ ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಹಿಂದುಳಿದ ವರ್ಗಗಳ ಆಯೋಗ ಮಾಡಿದ್ದ ಸಾಮಾಜಿಕ ಶೈಕ್ಷಣಿಕೆ ಸಮೀಕ್ಷೆ ದತ್ತಾಂಶದ ವಿಚಾರ, ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಕ್ಯಾಬಿನೆಟ್ ಸಚಿವರಲ್ಲಿ ಸಿಎಂ ಲಿಖಿತ ಅಭಿಪ್ರಾಯವನ್ನ ಕೇಳಿದ್ರು. ಬಹುತೇಕರು ಅಭಿಪ್ರಾಯ ಕೊಟ್ಟಿದ್ದಾರೆ. ಈ ಬಗ್ಗೆ ಚರ್ಚೆ ನಡೆದಿದೆ. ಆದರೆ ಅದು ಅಪೂರ್ಣ ಆಗಿದೆ. ಮುಂದಿನ ಸಂಪುಟ ಸಭೆಗಳಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗತ್ತೆ ಎಂದರು.
ಕೆಪಿಎಸ್ ಸಿ ಹಿಂದಿನ ಅಧ್ಯಕ್ಷ ಗೋನಾಳ್ ಭೀಮಪ್ಪ ಹಾಗೂ ಇತರ ಸದಸ್ಯರ ಮೇಲೆ ಅಭಿಯೋಜನೆ ವಿಚಾರ, 2011 ರ ಗೆಜೆಟೆಡ್ ಪ್ರೊಭೇಷನರಿ ಹುದ್ದೆಗಳ ಅಕ್ರಮ ಮಂಜೂರು ಆರೋಪ ಹೊತ್ತಿದ್ದ ಗೋನಾಳ್ ಭೀಮಪ್ಪ, ಈ ವಿಷಯದಲ್ಲಿ ಈ ಹಿಂದೆಯೇ ಒಂದು ಕಾನೂನು ಮಾಡಲಾಗಿದೆ. ಕ್ಯಾಬಿನೆಟ್ ಇಂದು ಕೋರ್ಟ್ ನೀಡದ ಆದೇಶದಂತೆ ನಡೆದುಕೊಳ್ಳಲು ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಈ ಅಭಿಯೋಜನಾ ನಿರ್ಧಾರವನ್ನ ಕೈ ಬಿಟ್ಟಿದೆ ಎಂದು ಎಚ್ ಕೆ ಪಾಟೀಲ್ ಹೇಳಿದರು.
ವೈದ್ಯರ ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಕೆ ವಿಚಾರ ಸಂಬಂಧ , ಈ ನಿಯಮದಲ್ಲಿ ಸಡಿಲಿಕೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಮಾಡಿದವರಿಗೆ ಮೊದಲ ಸೇವಾ ನಿಯೋಜನೆ ಗ್ರಾಮೀಣ ಪ್ರದೇಶದಲ್ಲಾಗುತ್ತಿತ್ತು. ಈಗ ಈ ಹಿಂದಿನ ಕಾನೂನನ್ನ ಸಡಿಲಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಈ ನಿರ್ಧಾರದಲ್ಲಿ ಮೂಲ ಉದ್ದೇಶ ಬದಲಾವಣೆ ಇಲ್ಲ. ಕಡ್ಡಾಯ ಸೇವೆ ಜೊತೆಗೆ ಅಗತ್ಯಕ್ಕನುಗುಣವಾಗಿ ಸಡಿಲಿಕೆಯನ್ನೂ ಮಾಡಲು ಸಂಪುಟ ಒಪ್ಪಿದೆ ಎಂದು ಎಚ್ ಕೆ ಪಾಟೀಲ್ ತಿಳಿಸಿದರು.
ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, , ಹೈಬ್ರೀಡ್ ಮಾದರಿಯಲ್ಲಿ ಟನಲ್ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ. ಟೆಂಡರ್ ಕರೆದು ಮುಂದಿನ ನಿರ್ಧಾರ ಮಾಡಲಾಗತ್ತೆ. 1600ಕೋಟಿ ಮೊತ್ತದ ಪ್ರಾಜೆಕ್ಟ್ ಇದಾಗಿದೆ. ಮೆಟ್ರೋ ನಾಲ್ಕನೇ ಹಂತಕ್ಕೆ ಒಪ್ಪಿಗೆ, 40ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದರು.
ಬೆಂಗಳೂರಿನ ಕಸ ಸಂಗ್ರಹ, ವಿಲೇವಾರಿಗೆ ಹೊಸ ಸ್ಪರ್ಶ ನೀಡಲಾಗುತ್ತದೆ. 4100ಕೋಟಿ ವೆಚ್ಚದಲ್ಲಿ ಗಾರ್ಬೇಜ್ ಕಲೆಕ್ಷನ್ ಮತ್ತು ಟ್ರಾನ್ ಪೋರ್ಟ್ ಪ್ರಾಜೆಕ್ಟ್ ಮಾಡಲಾಗ್ತಿದೆ. ಹೊಸ ಮಾದರಿಯಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿ ಮಾಡುವುದು ಇದರ ಉದ್ದೇಶ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
Key words: Cabinet meeting, decisions, Minister, H.K. Patil