ಸಂಪುಟ ವಿಸ್ತರಣೆಗೂ ಗ್ರಾ.ಪಂ ಚುನಾವಣೆ ಘೋಷಣೆಗೂ ಸಂಬಂಧ ಇಲ್ಲ- ಸಿಎಂ ಬಿಎಸ್ ಯಡಿಯೂರಪ್ಪ..

ಬೆಂಗಳೂರು,ನವೆಂಬರ್,30,2020(www.justkannada.in):  ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಗೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.logo-justkannada-mysore

ಸಂಪುಟ ವಿಸ್ತರಣೆ ಕುರಿತು ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,   ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಗೂ ಸಚಿವ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ.  ಇನ್ನು ಎರಡು ದಿನಗಳ ಕಾಲ ಸಂಪುಟ ವಿಸ್ತರಣೆಗೆ ಕಾಯೋಣ ಎಂದರು.cabinet-expansion-gp-election-announcement-nothing-cm-bs-yeddyurappa

ಗ್ರಾಮ ಪಂಚಾಯ್ತಿ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಅಭಿವೃದ್ಧಿ ಕೆಲಸ, ಇತರ ಚಟುವಟಿಕೆ ಮಾಡುವಂತಿಲ್ಲ. ಪಕ್ಷ ಸಂಘಟನೆಗೆ ಪಂಚಾಯಿತಿ ಚುನಾವಣೆ ಮುಖ್ಯ. ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕಾದರೇ ಒಳ್ಳೆಯ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಬೇಕು.  ಇನ್ನು ಈಗಾಗಲೇ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ತಂಡಗಳು ಪ್ರವಾಸ ಮಾಡಲಾಗುತ್ತಿದ್ದು, , ಗ್ರಾಮ ಸ್ವಾರಾಜ್ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದು ಬಿಎಸ್ ವೈ ತಿಳಿಸಿದರು.

Key words: cabinet expansion – GP-election -announcement -nothing – CM BS Yeddyurappa.