ಸಂಪುಟದಿಂದ ಸಿ.ಪಿ ಯೋಗೇಶ್ವರ್ ರನ್ನ ಕೈಬಿಟ್ಟು ಅವರನ್ನ ಬಂಧಿಸಿ-ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹ.

ದಾವಣಗೆರೆ,ಜೂ,1,2021(www.justkannada.in): ಸಚಿವ ಸಿ.ಪಿ ಯೋಗೇಶ್ವರ್ ರನ್ನ ಸಚಿವ ಸಂಪುಟದಿಂದ ಕೈಬಿಟ್ಟು, ಮೆಗಾಸಿಟಿ ಹಗರಣದಲ್ಲಿ ಬಂಧಿಸಿ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದರು.jk

 ದಾವಣಗೆರೆಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಜಲಸಂಪನ್ಮೂಲ ಅಥವಾ ಇಂಧನ ಖಾತೆ ಬೇಕಿತ್ತು. ರಾಮನಗರ ಜಿಲ್ಲೆ ಉಸ್ತುವಾರಿಯೂ ಸಿಗಬೇಕಿತ್ತು. ಆದರೆ ಸಿಗಲಿಲ್ಲ. ಹೀಗಾಗಿ ಸಿ.ಪಿ ಯೋಗೇಶ್ವರ್ ಗೆ ತಳಮಳವಾಗಿದೆ. ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ 65 ಶಾಸಕರ ಸಹಿ ಸಂಗ್ರಹಿಸಿ ಸಿಎಂಗೆ ನೀಡಿದ್ದೇವೆ. ಯೋಗೇಶ್ವರ್ ನ್ನ ಸಂಪುಟದಿಂದ ಕೈಬಿಡಿ  ಮೆಗಾ ಸಿಟಿ ಹಗರಣದಲ್ಲಿ ಯೋಗೇಶ್ವರ್ ಬಂಧನವಾಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕೊರೊನಾ ಸಂಕಷ್ಟ ಎದುರಾಗಿದೆ. ಹೀಗಾಗಿ ಕೊರೊನಾ ಸಂದರ್ಭ ಮುಗಿಯಲಿ. ನಂತರ ಶಾಸಕರು ಸುಮ್ಮನಿರುವ ಪ್ರಶ್ನೆಯೇ ಇಲ್ಲ. ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ. ಯೋಗೇಶ್ವರ್ ಅವರನ್ನು ಸಂಪುಟದಿಂದ ವಜಾ ಮಾಡುವವರೆಗೂ ಸುಮ್ಮನೆ  ಕೂರಲ್ಲ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದರು.

Key words: Cabinet- Dismiss CP Yogeshwar- arresting -MLA -MP Renukacharya