Sunday, September 20, 2026

BDA Apartments

ಸಂಪುಟ ವಿಸ್ತರಣೆ : ಕೇಂದ್ರ ನಾಯಕರ ನಿರ್ಧಾರಕ್ಕೆ ಬದ್ಧ- ಸಚಿವ ಕೆ.ಎಸ್ ಈಶ್ವರಪ್...
Home Front Page ಸಂಪುಟ ವಿಸ್ತರಣೆ : ಕೇಂದ್ರ ನಾಯಕರ ನಿರ್ಧಾರಕ್ಕೆ ಬದ್ಧ- ಸಚಿವ ಕೆ.ಎಸ್ ಈಶ್ವರಪ್ಪ.

ಸಂಪುಟ ವಿಸ್ತರಣೆ : ಕೇಂದ್ರ ನಾಯಕರ ನಿರ್ಧಾರಕ್ಕೆ ಬದ್ಧ- ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಜನವರಿ,24,2022(www.justkannada.in):  ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ನಾಯಕರ ನಿರ್ಧಾರಕ್ಕೆ ನಾನು ಬದ್ಧ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ,ಎಸ್ ಈಶ್ವರಪ್ಪ,  ರಾಜ್ಯ ಸಚಿವ ಸಂಪುಟದಲ್ಲಿ ಇನ್ನು 4 ಸ್ಥಾನ ಖಾಲಿ ಇದೆ. ಹೀಗಾಗಿ ಸಂಪುಟ ವಿಸ್ತರಣೆ ಅಗತ್ಯವಿದೆ.  ಸಚಿವ ಸ್ಥಾನಕ್ಕೆ  ಸಾಕಷ್ಟು ಪೈಪೋಟಿ ಇರುವುದು ಸತ್ಯ. ನನ್ನನ್ನ ಸಚಿವ ಸ್ಥಾನದಿಂದ ತೆಗೆದರೇ ಸಂತೋಷ. ಪಕ್ಷದ ಜವಾಬ್ದಾರಿ ಕೊಟ್ರೆ ಖುಷಿಯಿಂದ ಮಾಡುತ್ತೇನೆ.  ಕೇಂದ್ರ ನಾಯಕರ ನಿರ್ಧಾರಕ್ಕೆ ನಾನು ಬದ್ಧ ಎಂದರು.

ಸದ್ಯಕ್ಕೆ  ರಾಜ್ಯ ಬಿಜೆಪಿ ಘಟಕದ ಸ್ಥಾನ ಖಾಲಿ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯೂ ಇಲ್ಲ. ಮುಂದಿನ ಚುನಾವಣೆ ದೃಷ್ಠಿಯಿಂದ ಪಕ್ಷಸಂಘಟನೆ ಒತ್ತು ಕೊಡಲಾಗುತ್ತದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: cabinet-central leaders-Minister -KS Eshwarappa.