ಹಾಲಿನಿಂದ ಹಾಲ್ಕೋಹಾಲ್ ವರೆಗೆ  ಬೆಲೆ ಏರಿಸಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲಬೇಕು-ಸಿ.ಟಿ ರವಿ

ಮೈಸೂರು,ಮೇ,22,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡಿದ ಕಾಂಗ್ರೆಸ್ ವಿರುದ್ದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಗುಡುಗಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿ.ಟಿ ರವಿ, ಬೆಲೆ ಏರಿಕೆಯೇ ಸಿದ್ದರಾಮಯ್ಯ ಸರ್ಕಾರದ ಸಾಧನೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ. ಅದೇ ರೀತಿ ಅತಿ ಹೆಚ್ಚು ಸಾಲ ಮಾಡಿದವರು ಕೂಡ ಸಿದ್ದರಾಮಯ್ಯನವರೇ.  ಹಾಲಿನಿಂದ ಹಾಲ್ಕೋ ಹಾಲಿನವರೆಗೆ ಬೆಲೆ ಏರಿಸಿದ ಕೀರ್ತಿ ಇವರಿಗೆ ಸಲ್ಲಬೇಕು ಎಂದು ಲೇವಡಿ ಮಾಡಿದರು.

ವಿದ್ಯುತ್ ದರ ಸೇರಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ.  ಬೆಲೆ ಏರಿಕೆ  ಮಾಡಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಯೇ..?  ಸಾಧನಾ ಸಮಾವೇಶದಲ್ಲಿ ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಬೇಕಿತ್ತು ಎಂದು ಸಿಟಿ ರವಿ ಕುಟುಕಿದರು.

Key words: Siddaramaiah, credited, increasing,  prices, C.T. Ravi