ಬಿವೈ ವಿಜಯೇಂದ್ರ ಔಟ್ ಗೋಯಿಂಗ್ ಅಧ್ಯಕ್ಷ- ಮಾಜಿ ಸಚಿವ ಕೆ.ಎನ್ ರಾಜಣ್ಣ ಕಿಡಿ

ಬೆಳಗಾವಿ,ಡಿಸೆಂಬರ್,18,2025 (www.justkannada.in): ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಎಂದು ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಕಾಂಗ್ರೆಸ್ ನಾಯಕರು ಕೆಂಡಕಾರಿದ್ದಾರೆ.

ಈ ಕುರಿತು ಬಿವೈ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಕೆ.ಎನ್ ರಾಜಣ್ಣ, ವಿಜಯೇಂದ್ರ ಔಟ್ ಗೋಯಿಂಗ್ ರಾಜ್ಯಾಧ್ಯಕ್ಷ  ಅಂತಾ ಹೇಳೋಣ. ಸಿದ್ದರಾಮಯ್ಯ ಸಿಎಂ ಆಗಿ ಈಗಾಗಲೇ ಇದ್ದಾರೆ.  ಇನ್ನೂ  ಮುಂದಿನ ದಿನಗಳಲ್ಲೂ ಸಿಎಂ ಆಗಿ ಇರುತ್ತಾರೆ ಎಂದರು.

ಕಾಂಗ್ರೆಸ್ ರಾಜ್ಯದ ಖಜಾನೆಯನ್ನ ಲೂಟಿ ಮಾಡಿ  ತನ್ನ ಹೈಕಮಾಂಡ್‌ ಪಕ್ಷ ತೃಪ್ತಿಪಡಿಸುವ ಕೆಲಸ ಮಾಡುತ್ತಿದೆ ಎಂಬ ಬಿ.ವೈ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಕೆ.ಎನ್ ರಾಜಣ್ಣ, ಅದು ಅವರ ಅನುಭವ ಹೇಳಿದ್ದಾರೆ ಟಾಂಗ್ ಕೊಟ್ಟರು.

Key words: BY Vijayendra, Outgoing, President, K.N. Rajanna