ಸುದೀರ್ಘ ಸಿಎಂ ದಾಖಲೆ: ಅರಸು ಅವರನ್ನ ಸ್ಮರಿಸಿ ಕಾಂಗ್ರೆಸ್ ಗೆ ಕುಟುಕಿದ ಬಿವೈ ವಿಜಯೇಂದ್ರ

ಬೆಂಗಳೂರು,ಜನವರಿ,6,2026 (www.justkannada.in):  ಡಿ.ದೇವರಾಜ ಅರಸು ಅವರನ್ನ ಕಾಂಗ್ರೆಸ್ ಉಚ್ಚಾಟನೆ ಮಾಡಿತ್ತು. ಅರಸು ಅವರನ್ನು  2ನೇ ಅವಧಿಗೆ ಸಿಎಂ ಆಗಿ ಮುಂದುವರೆಯಲು ಬಿಟ್ಟಿದ್ದರೇ ದಾಖಲೆ ಮಾಡುತ್ತಿದ್ದರು ಎಂದು ಕಾಂಗ್ರೆಸ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕುಟುಕಿದರು.

ದೀರ್ಘಾವಧಿ ಸಿಎಂ ಆಗಿ ಸಿಎಂ ಸಿದ್ದರಾಮಯ್ಯ ದಾಖಲೆ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಕಾಂಗ್ರೆಸ್ ನವರು ಬಹಳ ಹೆಮ್ಮೆಯಿಂದ ಜಾಹೀರಾತು. ನೀಡಿದ್ದಾರೆ. ಸುದೀರ್ಘ ಅವಧಿಗೆ ಸಿಎಂ ಆಗಿ ದೇವರಾಜ ಅರಸು  ಅವರು ದಾಖಲೆ ಮಾಡಿದ್ದರು. ಅವರ ಅವಧಿಯಲ್ಲಿ ಭೂ ಸುಧಾರಣಾ ಕಾಯ್ದೆ ವಿಧವಾ ವೇತನ, ವೃದ್ದಾಪ್ಯ ವೇತನ ಸೌಲಭ್ಯ ಜಾರಿ ಮಾಡಿದ್ದರು.  ಮಲ ಹೊರುವ ಪದ್ದತಿ ನಿರ್ಮೂಲನೆ ಮಾಡಿದ್ದರು. ಆದರೆ ದೇವರಾಜ ಅರಸು ಅವರನ್ನು ಕಾಂಗ್ರೆಸ್ ಉಚ್ಚಾಟನೆ ಮಾಡಿತ್ತು. ಅರಸು ಅವರಿಗೆ 2ನೇ ಅವಧಿಗೆ ಸಿಎಂ ಆಗಿ ಮುಂದುವರೆಯಲು ಬಿಟ್ಟಿದ್ದರೆ ಅರಸು ಅವರು ದಾಖಲೆ ಮಾಡುತ್ತಿದ್ದರು ಎಂದು ಟಾಂಗ್ ಕೊಟ್ಟರು.

ಅರಸು ಅವರನ್ನು ಅಪಮಾನ ಮಾಡಿ ಉಚ್ಚಾಟನೆ ಮಾಡಿದ್ದ ಇಂದಿರಾ ಗಾಂಧಿ. ಇಂದಿರಾ ಗಾಂಧಿಗೆ ರಾಜಕೀಯ ಪುನರ್ ಜನ್ಮ ಕೊಟ್ಟಿದ್ದು ಡಿ.ದೇವರಾಜ ಅರಸು ಅವರು.  ಸಿದ್ದರಾಮಯ್ಯ ಅವರೇ ಅರಸು ದಾಖಲೆ ಮುರಿಯಲು ಹೊರಟಿದ್ದೀರಿ.  ನೀವು ಎಷ್ಟು ಅವಧಿಗೆ ಸಿಎಂ ಆಗಿದ್ದೀರಿ ಎನ್ನುವುದು ಮುಖ್ಯವಲ್ಲ. ಆ ಅವಧಿಯಲ್ಲಿ ಮಾಡುವ ಕೆಲಸಗಳು ಮುಖ್ಯ ಎಂದು ಬಿವೈ ವಿಜಯೇಂದ್ರ ಟೀಕಿಸಿದರು.

Key words: Longest, CM, record, Siddaramaiah, D.Devaraj Urs,  BY Vijayendra