ಅಕ್ರಮ ವಲಸಿಗರಿಗೆ ಮನೆ: ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಯತ್ನ- ಬಿವೈ ವಿಜಯೇಂದ್ರ

ಬೆಳಗಾವಿ,ಡಿಸೆಂಬರ್,30,2025 (www.justkannada.in):  ನಿಯಮಗಳನ್ನ ಗಾಳಿಗೆ ತೂರಿ ಕೇರಳದ ಅಕ್ರಮ ವಲಸಿಗರಿಗೆ ಮನೆ ಕಲ್ಪಿಸಿಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ,, ಕೋಗಿಲು ಬಡಾವಣೆಯಲ್ಲಿ ಕೇರಳ ವಲಸಿಗರು ಅಕ್ರಮವಾಗಿ ನೆಲೆಸಿದ್ದರು. ಅಕ್ರಮ ವಲಸಿಗರ ಮನೆಗಳನ್ನು ಈ ಸರ್ಕಾರ ನೆಲಸಮ ಮಾಡಿತು. ನಂತರ ಈ ಪ್ರಕರಣ ಸಂಬಂಧ ಕೇರಳ ಸಿಎಂ ಹೇಳಿಕೆ ನೀಡಿದರು. ಬಳಿಕ ಕೆಸಿ ವೇಣುಗೋಪಾಲ್ ಬೆದರಿಕೆ ಹಾಕುವ ಕೆಲಸ ಮಾಡಿದರು.  ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗೆ ಬೆದರಿಕೆ ಹಾಕುವ ಕೆಲಸ ಮಾಡಿದರು. ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಕುರ್ಚಿ ಪಡೆಯಲು ಡಿಕೆ ಶಿವಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ.  ಸಿಎಂ, ಡಿಸಿಎಂ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.  ವೇಣುಗೋಪಾಲ್ ಬೆದರಿಕೆ ಬೆನ್ನಲ್ಲೆ ಸಿಎಂ ಡಿಸಿಎಂ ಉಲ್ಟಾ ಹೊಡೆದು ಅಕ್ರಮ ವಲಸಿಗರಿಗೆ ಮನೆ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಸಿಎಂ ಕುರ್ಚಿ ಉಳಿಸಿಕೊಳ್ಳಲು ವೇಣುಗೋಪಾಲ್ ಅಣತಿಯಂತೆ ಕುಣಿಯುತ್ತಿದ್ದಾರೆ ಎಂದರು.

ರಾಜ್ಯದ ಹಿತಾಸಕ್ತಿಗೆ ಪೂರಕವಾಗಿ ಸಿಎಂ ನಿರ್ಧಾರ ತೆಗೆದುಕೊಳ್ಳಬೇಕು ಯಾರದ್ದೋ ಮಾತು ಕೇಳಿ ಮನಸೋ ಇಚ್ಚೇ ತೀರ್ಮಾನ ಸಾಧ್ಯವೇ?  ನಿಯಮ ಗಾಳಿಗೆ ತೂರಿ ವಲಸಿಗರಿಗೆ ಮನೆ ಕೊಡಲು ಹೊರಟಿದ್ದಾರೆ ಎಂದು ಹರಿಹಾಯ್ದರು.

Key words: House, illegal immigrants, CM, Siddaramaiah, BY Vijayendra