ಪ್ರವಾಹದಿಂದ ಜನ ತತ್ತರ: ಪರಿಹಾರ ನೀಡದೆ ಸರ್ಕಾರ ನಿದ್ರೆಯಲ್ಲಿದೆ- ಬಿವೈ ವಿಜಯೇಂದ್ರ ಕಿಡಿ

ಕಲಬುರ್ಗಿ,ಸೆಪ್ಟಂಬರ್,30,2025 (www.justkannada.in):  ಕಲ್ಯಾಣ ಕರ್ನಾಟಕದ ಜನ ಪ್ರವಾಹದಿಂದ ತತ್ತರಿಸಿದ್ದಾರೆ. ಆದರೆ ಸರ್ಕಾರ ಪರಿಹಾರ ನೀಡದೆ ನಿದ್ರಾವಸ್ಥೆಯಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಮಳೆಯಿಂದಾಗಿ ಕಲ್ಬುರ್ಗಿಯಲ್ಲಿ ಶೇ 70 ರಷ್ಟು ಬೆಳೆ ಹಾನಿಯಾಗಿದೆ. ಅತಿವೃಷ್ಠಿಯು ರೈತರಿಗೆ ಬರೆ ಎಳೆದಿದೆ ಸಂಕಷ್ಟದಲ್ಲಿರುವ  ರೈತರ  ನೆರವಿಗೆ ಬನ್ನಿ. ಸಿಎಂ ಸಿದ್ದರಾಮಯ್ಯರಿಂದ ವೈಮಾನಿಕ ಸಮೀಕ್ಷೆ ಸ್ವಾಗತಿಸುತ್ತೇನೆ.   ಕಲಬುರುಗಿಗೆ ಬರುವ ಮುನ್ನ ಸಿಎಂ ಪರಿಹಾರ ಘೋಷಿಸಲಿ ಎಂದು ಆಗ್ರಹಿಸಿದರು.

ಇದೇ ವೇಳೆ ಜಾತಿಗಣತಿ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ,  ಜಾತಿಗಣತಿ ಮೂಲಕ ಸರ್ಕಾರ ಪಗಡೆಯಾಟ ಆಡುತ್ತಿದೆ. 180 ಕೋಟಿ ರೂ. ವೆಚ್ಚದಲ್ಲಿ ಕಾಂತರಾಜು ವರದಿ ಮಾಡಿದ್ರಿ  ಆದರೆ ಯಾಕೆ ಜಾರಿ ಮಾಡಲಿಲ್ಲ. ಹಿಂದೂ ಸಮಾಜವನ್ನ ಒಡೆಯುವ ಯತ್ನ ಮಾಡುತ್ತಿದ್ದೀರಿ.  ಜನಗಣತಿಗೆ ನಮ್ಮ ವಿರೋಧವಿಲ್ಲ. ಆದರೆ ಸಿದ್ದರಾಮಯ್ಯ ನಿಲುವಿಗೆ ವಿರೋಧವಿದೆ ಎಂದರು.

Key words: People, floods,  Government, relief, BY Vijayendra