ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಂದಲೂ ಟ್ರಾಫಿಕ್ ನಿಯಮ ಉಲ್ಲಂಘನೆ: ಬಿತ್ತು ಫೈನ್

ಬೆಂಗಳೂರು,ಸೆಪ್ಟಂಬರ್,9,2025 (www.justkannada.in):  ಸಿಎಂ ಸಿದ್ದರಾಮಯ್ಯ ಅವರ ಕಾರು 7 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದು ಕಂಡು ಬಂದ ಬಳಿಕ ದಂಡ ಪಾವತಿಸಲಾಗಿತ್ತು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಕಾರು ಸಹ ಸಂಚಾರ ನಿಯಮ ಉಲ್ಲಂಘಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬಿವೈ ವಿಜಯೇಂದ್ರ ಅವರು ಬಳಸುವ KA03 MY4545 ಕಾರಿನ ಮೇಲೆ 10 ಕೇಸ್‌ ಗಳು ದಾಖಲಾಗಿದ್ದು, ಸೀಟ್ ಬೆಲ್ಟ್, ಓವರ್ ಸ್ಪೀಡ್, ಜಂಪಿಂಗ್ ಟ್ರಾಫಿಕ್ ಸಿಗ್ನಲ್, ಜೀಬ್ರಾ ಕ್ರಾಸ್ ಕ್ರಾಸಿಂಗ್ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ. ಈ ದಂಡಗಳು 2020ರಿಂದಲೂ ಬಾಕಿ ಇದ್ದವು ಎನ್ನಲಾಗಿದೆ.

ಒಟ್ಟು 3,250 ರೂ  ದಂಡ ವಿಧಿಸಲಾಗಿದ್ದು ಪಾವತಿ ಮಾಡಿದ್ದಾರೆ ಎನ್ನಲಾಗಿದೆ.

Key words: BJP state president, BY Vijayendra,  violated, traffic rules