ಬೆಂಗಳೂರು ,ಆಗಸ್ಟ್,18,2025 (www.justkannada.in): ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಯೂಟ್ಯೂಬರ್ಸ್’ಗಳ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿವೈ ವಿಜಯೇಂದ್ರ, ಧರ್ಮಸ್ಥಳದ ಕುರಿತು ನಡೆಯುತ್ತಿರುವ ಅಪಪ್ರಚಾರದಿಂದ ಭಕ್ತರು ಆತಂಕಕ್ಕೀಡಾಗಿದ್ದಾರೆ.
ಗೃಹ ಸಚಿವರು ಎಸ್ ಐಟಿ ತನಿಖೆಯ ಕುರಿತು ಮಧ್ಯಂತರ ವರದಿ ನೀಡಬೇಕು. ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ನಂಬಿಕೆಗಳನ್ನು ಕೆಡಿಸುತ್ತಿರುವ ಯೂಟ್ಯೂಬರ್ಸ್‌ಗಳ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ಏಕೆ ನಡೆಸುತ್ತಿಲ್ಲ? ಎಂದು ಬಿ.ವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.
Key words: Dharmasthala case, BY Vijayendra, FIR, YouTubers