ಬೆಂಗಳೂರು,ಆಗಸ್ಟ್,13,2025 (www.justkannada.in): ಆಗಸ್ಟ್ 17 ರಂದು ನಮ್ಮ ಶಾಸಕರು, ಪರಿಷತ್ ಸದಸ್ಯರು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥೇಶ್ವರನ ದರ್ಶನ ಪಡೆಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಆಗಸ್ಟ್ 17ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದು ಬರುತ್ತೇವೆ. ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣಧಲ್ಲಿ ನಾವು ಮಧ್ಯ ಪ್ರವೇಶಿಸಲ್ಲ. ನಾವು ಬಿಜೆಪಿ ಕಾರ್ಯಕರ್ತರಾಗಿ ಧರ್ಮಸ್ಥಳಕ್ಕೆ ಹೋಗುತ್ತಿಲ್ಲ. ಮಂಜುನಾಥನ ಭಕ್ತರಾಗಿ ಅಲ್ಲಿಗೆ ಹೋಗುತ್ತಿದ್ದೇವೆ ನಮ್ಮ ನಿಲುವಿನ ಬಗ್ಗೆ ಸ್ಪಷ್ಟತೆ ಇದೆ. ಎಸ್ ಐಟಿ ತನಿಖೆ ಬೇಗ ಮುಗಿಯಬೇಕು. ಪ್ರಕರಣವನ್ನ ಹೀಗೆಯೇ ಎಳೆದುಕೊಂಡು ಹೋಗುವುದು ಸರಿಯಲ್ಲ. ಗೊಂದಲಗಳಿಗೆ ಬೇಗ ತೆರೆ ಬೀಳಬೇಕು. ತನಿಖೆ ಹಿಂದೆ ಎಸ್ ಡಿಪಿಐನಂತಹ ಸಂಘಟನೆಗಳ ಪಿತೂರಿ ನಡೆಯುತ್ತಿದೆ. ನಾವು ಮಂಜುನಾಥನ ದರ್ಶನ ಪಡೆಯಲು ಮಾತ್ರ ಹೋಗುತ್ತಿದ್ದೇವೆ ಎಂದರು.
ಸಚಿವ ಸ್ಥಾನದಿಂದ ಕೆಎನ್ ರಾಜಣ್ಣ ವಜಾ ಬಗ್ಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಉತ್ತರ ಕೊಡಬೇಕಾಗುತ್ತದೆ. ಸದನದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಉತ್ತರ ನೀಡಬೇಕು ಎಂದು ಬಿವೈ ವಿಜಯೇಂದ್ರ ಹೇಳಿದರು.
Key words: MLAs, MLCs, visit , Dharmasthala, BY Vijayendra