Thursday, August 13, 2026

BDA Apartments

Home Front Page ಪಕ್ಷ ನನ್ನಸ್ವತ್ತೂ ಅಲ್ಲ, ಅವರ ಸ್ವತ್ತೂ ಅಲ್ಲ: ಹಗುರ ಮಾತು ಶೋಭೆ ತರಲ್ಲ- ಬಿವೈ ವಿಜಯೇಂದ್ರ...

ಪಕ್ಷ ನನ್ನಸ್ವತ್ತೂ ಅಲ್ಲ, ಅವರ ಸ್ವತ್ತೂ ಅಲ್ಲ: ಹಗುರ ಮಾತು ಶೋಭೆ ತರಲ್ಲ- ಬಿವೈ ವಿಜಯೇಂದ್ರ ಗುಡುಗು

ಬೆಂಗಳೂರು,ಜನವರಿ,30,2025 (www.justkannada.in): ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಿದ್ದು ನನ್ನ ಮಾತು ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಸಂಸದ ಕೆ.ಸುಧಾಕರ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಪಕ್ಷ ನನ್ನ ಸ್ವತ್ತೂ ಅಲ್ಲ. ಅವರ ಸ್ವತ್ತೂ ಅಲ್ಲ, ಮುಂದಿನ ಬಾರಿ ಸಿಎಂ ಆಗಲು ನಾನು ಸಂಘಟನೆ ಮಾಡುತ್ತಿಲ್ಲ ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರಲ್ಲ. ಹಗುರವಾಗಿ ಮಾತನಾಡಬಾರದು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

ಸುಧಾಕರ್ ಆಕ್ರೊಶಭರಿತ ಮಾತು ನೋಡಿದ್ದೇನೆ.  ನಮ್ಮನ್ನು ಸಮಾಧಿ ಮಾಡಲು ಹೊರಟಿದ್ದಾರೆ ಎಂದಿದ್ದಾರೆ ಈ ರೀತಿ ಆಕ್ರೋಶದ ಮಾತು ಸರಿಯಲ್ಲ. ನಾನು ಸುಧಾಕರ್ ಭೇಟಿಯಾಗಿ ಮಾತನಾಡುವೆ.  ನನ್ನ ಮೇಲೆ ಸುಧಾಕರ್ ಆರೋಪ ಮಾಡೋದು ಸರಿಯಲ್ಲ ಇದರಿಂದ ಅವರಿಗೂ ಗೌರವ ಸಿಗಲ್ಲ ಪಕ್ಷಕ್ಕೂ ಗೌರವ ಇಲ್ಲ ಎಂದರು.

Key words: MP, Sudhakar, BJP state President, BY Vijayendra