ಕೆ.ಎನ್ ರಾಜಣ್ಣ ರಾಜೀನಾಮೆ: ಕಾಂಗ್ರೆಸ್ ನಿಜ ಬಣ್ಣ ಬಯಲು- ಬಿವೈ ವಿಜಯೇಂದ್ರ

ಬೆಂಗಳೂರು,ಆಗಸ್ಟ್,11,2025 (www.justkannada.in):  ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆಯಿಂದ ಕಾಂಗ್ರೆಸ್ ನಿಜ ಬಣ್ಣ ಬಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಸಚಿವ ಕೆ.ಎನ್ ರಾಜಣ್ಣ ರಾಜೀನಾಮೆ ಕುರಿತು ಮಾತನಾಡಿದ ಬಿ.ವೈ ವಿಜಯೇಂದ್ರ,  ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿದರು. ರಾಜಣ್ಣ ರಾಹುಲ್ ಗಾಂಧಿ ಆರೋಪದ ಬಗ್ಗೆ ಆಕ್ಷೇಪಿಸಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದು ಆಗಿದ್ದು ಎಂದಿದ್ದರು. ಆದರೆ ರಾಹುಲ್ ಗಾಂಧಿ ಅವರಿಗೆ ಸತ್ಯ ಕೇಳಲು ಆಗಿಲ್ಲ ಎಂದು ಕುಟುಕಿದರು.

ರಾಹುಲ್ ಗಾಂಧಿ ಸಂವಿಧಾನ ಹಿಡಿದು ದಲಿತರ ಪರ ಅಂತಾರೆ . ಆದರೀಗ ಎಸ್ ಟಿ ಸಮುದಾಯದ ಕೆಎನ್ ರಾಜಣ್ಣ ಅವರನ್ನ ರಾಜೀನಾಮೆ ಕೊಡೊಸಿದ್ದಾರೆ.  ಈಗ ಕಾಂಗ್ರೆಸ್ ನ ನಿಜ ಬಣ್ಣ ಬಯಲಾಗಿದೆ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

Key words: KN Rajanna, Resignation,  Congress, BY Vijayendra