ಬೆಂಗಳೂರು,ಆಗಸ್ಟ್,2,2025 (www.justkannada.in): ರಾಜ್ಯದಲ್ಲಿ ಒಂದು ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಭಟನೆಗೆ ಮುಂದಾಗಿದ್ದು ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿವೈ ವಿಜಯೇಂದ್ರ, ಚುನಾವಣೆಯಲ್ಲಿ ಅಕ್ರಮ ಎಂದು ಆರೋಪಿಸಿ ಚುನಾವಣಾ ಆಯೋಗದ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದಾರೆ. ಕಾಂಗ್ರೆಸನವರು ವರಸೆ ಆರಂಭಿಸಿದ್ದಾರೆ ಚುನಾವಣಾ ಆಯೋಗ ದುರ್ಬಳಕೆ ಎಂದು ಆರೋಪಿಸಿದ್ದಾರೆ. ಅಕ್ರಮದ ಬಗ್ಗೆ ಪುರಾವೆ ಇದ್ದಿದ್ರೆ ಕೋರ್ಟ್ ಗೆ ಹೋಗಬಹುದಿತ್ತು ಕೋರ್ಟ್ ಗೆ ನೀಡಿ ಪ್ರಶ್ನಿಸಬಹುದಿತ್ತು. ಆದರೆ ರಾಹುಲ್ ಗಾಂಧಿ ಕಪಟ ನಾಟಕ ಆರಂಭಿಸಿದ್ದಾರೆ . ಪ್ರಧಾನಿ ಮೋದಿಯನ್ನ ನೋಡಲಾಗುತ್ತಿಲ್ಲ. ತುರ್ತುಪರಿಸ್ಥಿತಿ ಸೃಷ್ಠಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಆಗಸ್ಟ್ 5 ರಂದು ರಾಹುಲ್ ಗಾಂಧಿ ಡ್ರಾಮಾ ಮಾಡುತ್ತಾರೆ. ರಾಹುಲ್ ಗಾಂಧಿ ಬರುತ್ತಾರೆ ಅಂತ ಮರ ಕಡಿದರು ಪಾರ್ಕ್ ಕಾಂಪೌಂಡ್ ಒಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜ್ಯದ ಜನರೆದುರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Key words: Rahul Gandhi, protest, started, hypocritical drama, BY Vijayendra