ಬೆಂಗಳೂರು,ಜುಲೈ,30,2025 (www.justkannada.in): ಪ್ರಧಾನಿ ಮೋದಿ , ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿ ಬಿಜೆಪಿಯಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಎಪಿಜೆ ಅಬ್ದುಲ್ ಕಲಾಂ ಯೂಥ್ ಸ್ಪಾರ್ಟ್ ಅಪ್ ಅವಾರ್ಡ್ ಕಾರ್ಯಗಾರದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಚುನಾವಣಾ ಆಯೋಗವನ್ನ ಪ್ರಶ್ನಿಸುವ ದುಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಕಾಂಗ್ರೆಸ್ ನಲ್ಲಿ ಅನೇಕರು ಅನುಕಂಪದ ಆಧಾರದಲ್ಲಿ ಪ್ರಧಾನಿ ಆಗಿದ್ದಾರೆ. ಮೋದಿ ಅಭಿವೃದ್ದಿ ಆಧಾರದಲ್ಲಿ 3ನೇ ಬಾರಿಗೆ ಪ್ರಧಾನಿಯಾಗಿದ್ದಾರೆ ಎಂದರು.
ಬಿಜೆಪಿಯಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಬೆಳೆಯಲು ಸಹಕರಿಸುತ್ತೇನೆ. ಈ ಮಧ್ಯೆ ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಕೇಂದ್ರದ ಯೋಜನೆಗಳಲ್ಲಿ ಮುಸ್ಲೀಂ, ಕ್ರಿಶ್ಚಿಯನ್ ಫಲಾನುಭವಿಗಳು ಇಲ್ಲವಾ? ಕಾಂಗ್ರೆಸ್ ಅಲ್ಪಸಂಖ್ಯಾತರನ್ನ ವೋಟ್ ಬ್ಯಾಂಕ್ ಮಾಡಿಕೊಂಡಿದೆ ಅದನ್ನು ಬಿಟ್ಟು ಯಾವುದೇ ಯೋಜನೆ ಕೊಟ್ಟಿಲ್ಲ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
Key words: BJP , Modi, BSY, minorities, BY Vijayendra