ಬೆಂಗಳೂರು,ಜುಲೈ,25,2025 (www.justkannada.in): ರಾಜ್ಯದ ಲೋಕಸಭಾ ಚುನಾವಣೆ ವೇಳೆ ಒಂದು ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಧ್ವನಿಗೂಡಿಸಿದ್ದಾರೆ. ಇವರ ಹೇಳಿಕೆ ಅಪಾಯಕಾರಿ ಬೆಳವಣಿಗೆ. ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಬಿಜೆಪಿ ವಿರುದ್ದ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ಸಿಎಂ ಕೂಡ ಧ್ವನಿಗೂಡಿಸಿದ್ದಾರೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಿದೆ ಕಾಂಗ್ರೆಸ್ ಸ್ಥಿತಿ. ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗವನ್ನ ಅವಮಾನಿಸಿದೆ. ಡಿಸಿಎಂ ಡಿಕೆ ಕೂಢ ಇದನ್ನೇ ಹೇಳಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ರಾಜ್ಯದ ಜನರಿಗೆ ಕ್ಷಮೆ ಕೇಳಬೇಕು ಎಂದರು.
ಬಿಜೆಪಿಯಿಂದ ದುರುಪಯೋಗ ಾಗಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿತ್ತಾ? ರಾಹುಲ್ ಗಾಂಧಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹೇಳಿಕೆ ಅಪಾಯಕಾರಿ ಬೆಳವಣಿಗೆ ಕಾಂಗ್ರೆಸ್ ನ ತುರ್ತು ಪರಿಸ್ಥಿತಿಯ ಮನಸ್ಥಿತಿ ಬದಲಾಗಿಲ್ಲ. ಏನಾದರೂ ಹೇಳುವುದಿದ್ದರೇ ಸುಪ್ರೀಂಕೋರ್ಟ್ ನಲ್ಲಿ ಹೇಳಲಿ ಜನರು ವಿಶ್ವಾಸವಿಟ್ಟ ಸಂಸ್ಥೆ ಮೇಲೆ ಕೊಡಲಿ ಪೆಟ್ಟುಕೊಡುವ ಕೆಲಸವಿದು ಎಂದು ಕಿಡಿಕಾರಿದರು.
Key words: Rahul Gandhi, Siddaramaiah, statement, BY Vijayendra