ಬೆಂಗಳೂರು,ಜುಲೈ,12,2025 (www.justkannada.in): ಸರ್ಕಾರದಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ . ಯಾವಾಗ ಗುಡುಗು ಸಿಡಿಲಿನ ಮಳೆ ಬರುತ್ತೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಯಲ್ಲಿದ್ದರು. ರಾಹುಲ್ ಗಾಂಧಿ ಅವರ 10 ನಿಮಿಷ ಭೇಟಿ ಸಹ ಸಿಗದೆ ವಾಪಸ್ ಆಗಿದ್ದಾರೆ. ಇದರ ಅರ್ಥ ಸಿಎಂ ಹೈಕಮಾಂಡ್ ಮಧ್ಯೆ ಸಂಬಂಧ ಅಳಸಿದೆ ಅಂತ. ರಾಹುಲ್ ಗಾಂಧಿ ಭೇಟಿಯಾಗದೆ ಸಿಎಂ ಡಿಸಿಎಂ ವಾಪಸ್ ಆಗಿದ್ದು ದೊಡ್ಡ ಬೆಳವಣಿಗೆ ಎಂದರು.
ಕಾಂಗ್ರೆಸ್ ಪಕ್ಷ ಸರ್ಕಾರದ ಮಧ್ಯೆ ಎಲ್ಲವೂ ಸರಿ ಇಲ್ಲ ಅನ್ನೋದು ಸತ್ಯ. ಇಬ್ಬರ ನಡುವಿನ ಹಗ್ಗ ಜಗ್ಗಾಟದಲ್ಲಿ ಕುರ್ಚಿ ಫೈಟ್ ನಡೆಯುತ್ತಿದೆ . ಇದರಿಂದ ರಾಜ್ಯದ ಜನರಿಗೆ ಒಳ್ಳಯದು ಆಗಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದರು.
Key words: CM, DCM, government, Rahul Gandhi, BY Vijayendra