ಉಪಚುನಾವಣೆ:  ಎರಡು ಕ್ಷೇತ್ರಗಳಲ್ಲಿ 11 ಗಂಟೆವರೆಗೆ ಆದ ಮತದಾನ ಪ್ರಮಾಣ ಮಾಹಿತಿ ಇಲ್ಲಿದೆ..

ಬಾಗಲಕೋಟೆ/ದಾವಣಗೆರೆ,ಏಪ್ರಿಲ್,9,2026 (www.justkannada.in):  ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ.

ಬೆಳಿಗ್ಗೆ 11 ಗಂಟೆ ವೇಳೆಗೆ ಬಾಗಲಕೋಟೆಯಲ್ಲಿ  ಶೇ 27.83 ರಷ್ಟು ಮತದಾನವಾದರೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ 22.01 ರಷ್ಟು ಮತದಾನವಾಗಿದೆ.

ಪಕ್ಷಕ್ಕೆ ತೊಂದರೆ ಆಗದಿರಲಿ ಎಂದು ಕಣದಿಂದ ಹಿಂದೆ ಸರಿದಿದ್ದೇನೆ- ಸಾದಿಕ್ ಪೈಲ್ವಾನ್

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಸಾದಿಕ್ ಪೈಲ್ವಾನ್ ಮತದಾನ ಮಾಡಿದರು. ಸಾದಿಕ್ ಪೈಲ್ವಾನ್ ಸ್ಕೂಟರ್ ನಲ್ಲಿ ಬಂದು ಮತಗಟ್ಟೆ ಸಂಖ್ಯೆ 28 ರಲ್ಲಿ ವೋಟಿಂಗ್ ಮಾಡಿದರು.

ಬಳಿಕ ಮಾತನಾಡಿದ ಅವರು,  ನಾನು ಹಾಗೂ ನನ್ನ ಮಕ್ಕಳು ಚುನಾವಣೆಯಲ್ಲಿ ಓಡಾಡುತ್ತಿದ್ದೇವೆ. ಕೆಲ ಪಕ್ಷೇತರ  ಅಭ್ಯರ್ಥಿಗಳು ಸಹ ನನ್ನ ಜೊತ ಇದ್ದಾರೆ. ಪಕ್ಷಕ್ಕೆ ತೊಂದರೆ ಆಗದಿರಲಿ ಎಂದು ಕಣದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದರು.

Key words: By-election, Davanagere south, Bagalkoe, voting