ಉಪ ಚುನಾವಣೆಯಲ್ಲಿ ನನ್ನ ವಿರುದ್ದ ಗೆದ್ದವನು ಈಗ ಎಲ್ಲಿ ಹೋದ..?- ಕಳಲೆ ಕೇಶವಮೂರ್ತಿ ವಿರುದ್ಧ ಶ್ರೀನವಾಸ್ ಪ್ರಸಾದ್ ವಾಗ್ದಾಳಿ.

ಮೈಸೂರು,ಫೆಬ್ರವರಿ,28,2023(www.justkannada.in):  ನಂಜನಗೂಡು ಉಪಚುನಾವಣೆಲಯಲ್ಲಿ ಗೆದ್ದು ಕಳೆದ ವಿಧಾನಸಭೆಯಲ್ಲಿ ಸೋಲನುಭವಿಸಿದ ಕಳಲೆ ಕೇಶವಮೂರ್ತಿ ವಿರುದ್ಧ ಇದೀಗ ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ನಂಜನಗೂಡಿನಲ್ಲಿ ಇಂದು ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಉಪ ಚುನಾವಣೆಯಲ್ಲಿ ನನ್ನ ವಿರುದ್ದ ಗೆದ್ದವನು ಈಗ ಎಲ್ಲಿ ಹೋದ. ಈಗ ಅವನನ್ನು ಒದ್ದು ಕಳಿಸಿದ್ದಾರೆ. ಆತ ಈಗ ಪತ್ತೆ ಇಲ್ಲ. ಅವನು ಈಗ ದನ ಮೇಯಿಸೋಕೆ ಹೋದ್ನಾ. ಎಮ್ಮೆ ಮೇಯಿಸೋಕೆ ಹೋದನಾ ಗೊತ್ತಿಲ್ಲ ಎಂದು ಕಳಲೆ ಕೇಶವಮೂರ್ತಿ ವಿರದ್ದ  ಕಿಡಿಕಾರಿದರು.

ಆತನ ಜಾಗಕ್ಕೆ ಧ್ರುವ ನಾರಾಯಣ್, ಹೆಚ್.ಸಿ ಮಹದೇವಪ್ಪ ಕಚ್ಚಾಡುತ್ತಿದ್ದಾರೆ. ಉಪ ಚುನಾವಣೆಯಲ್ಲಿ ನನ್ನ ವಿರುದ್ ಆಟ ಆಡಿದವರು ಎಲ್ಲಿ ಹೋದರು. ನನ್ನ ವಿರುದ್ದ ಆಟ ಆಡಿದರವರಲ್ಲಿ ಒಬ್ಬ ಟಿ. ನರಸೀಪುರಲ್ಲಿ ಅವಿತುಕೊಂಡ. ಸಿದ್ದರಾಮಯ್ಯ ಪಂಚೆ ಎತ್ತಿಕೊಂಢು ಕೋಲಾರಕ್ಕೆ ಹೋದರು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದರು.

Key words: by-election- against- Kalale Kesavamurthy-MP-  Srinavas Prasad