ಕರ್ನೂಲ್,ಅಕ್ಟೋಬರ್,24,2025 (www.justkannada.in): ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಬೈಕ್ ಗೆ ಡಿಕ್ಕಿಯಾಗಿ ಹೊತ್ತಿ ಉರಿದು 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿ ನಡೆದಿದೆ.
ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ನಲ್ಲಿ 40 ಜನರು ಪ್ರಯಾಣಿಸುತ್ತಿದ್ದರು. ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಶುಕ್ರವಾರ ಮುಂಜಾನೆ 3 ಗಂಟೆ ವೇಳೆಗೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾವೇರಿ ಟ್ರಾವೆಲ್ಸ್ನ ವೋಲ್ವೋ ಬಸ್ ಬೆಂಕಿಗೆ ಆಹುತಿಯಾಗಿ 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
ಇದು ಎಸಿ ಬಸ್ ಆಗಿರುವುದರಿಂದ, ಪ್ರಯಾಣಿಕರು ಕಿಟಕಿಗಳನ್ನು ಒಡೆದು ಹೊರಗೆ ಎತ್ತುಕೊಂಡು ಬರಬೇಕಾಯಿತು. ಗಾಜು ಒಡೆದು ಕೆಲವರು ಹೊರ ಬಂದಿದ್ದಾರೆ. ಪ್ರಯಾಣಿಕರ ಪಟ್ಟಿಯ ಪ್ರಕಾರ, ಇಬ್ಬರು ಚಾಲಕರು ಸೇರಿದಂತೆ ಒಟ್ಟು 40 ಜನ ಆ ಬಸ್ ನಲ್ಲಿದ್ದರು ಎನ್ನಲಾಗಿದೆ.
Key words: Private bus, fire, More than, 20 people, burnt







