ಟಿ.ನರಸಿಪುರ ಪೊಲೀಸ್ ಠಾಣೆಯಲ್ಲಿ  ಬುಲೆಟ್ ನಾಪತ್ತೆ ಕೇಸ್: ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆ…

ಮೈಸೂರು,ಜೂ,10,2020(www.justkannada.in): ಟಿ ನರಸಿಪುರ ಪೊಲೀಸ್ ಠಾಣೆಯಲ್ಲಿ  ಗುಂಡು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆಯಾಗಿವೆ.

ಟಿ ನರಸೀಪುರ ಪೊಲೀಸ್ ಠಾಣೆಯಿಂದ 303 ಮಾದರಿಯ ಬಂದೂಕಿನ 50 ಗುಂಡುಗಳು ನಾಪತ್ತೆಯಾಗಿದ್ದವು. ಈ ಸಂಬಂಧ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ರಿಷ್ಯಂತ್ ಅವರು ಇಬ್ಬರನ್ನು ಅಮಾನತುಗೊಳಿಸಿದ್ದರು. ಈ ಕುರಿತು ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.bullet-missing-case-t-narasipura-police-station-20-bullets-found

ಇದೀಗ ಸುಳಿವಿನ ಆಧಾರದ ಮೇಲೆ ಕಪಿಲಾ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಎಎಸ್‌ಪಿ ಸ್ನೇಹ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, 2 ಗಂಟೆಗಳ ಶೋಧದ ನಂತರ 20 ಗುಂಡುಗಳು ಪತ್ತೆಯಾಗಿವೆ. ಉಳಿದ 30 ಗುಂಡುಗಳ ಪತ್ತೆಗಾಗಿ‌  ಶೋಧಕಾರ್ಯ ಮುಂದುವರೆದಿದೆ.

Key words: Bullet-missing case –T.Narasipura- police station-20 bullets -found