ಮೈಸೂರು,ಮಾರ್ಚ್,28,2026 (www.justkannada.in): ರಾಜ್ಯದ ಇತ್ತೀಚಿನ ಬಜೆಟ್ ಅಧಿವೇಶನವು ಆಡಳಿತ ಮತ್ತು ರಾಜಕೀಯದ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಉಭಯ ಸದನಗಳ ಮುಂದಿಟ್ಟು ಸಮರ್ಥವಾಗಿ ಮಂಡಿಸಿದರೆ, ವಿಪಕ್ಷಗಳು ಮೂಲಭೂತ ವಿಚಾರಗಳಲ್ಲೇ ಹಿಡಿತ ಕಳೆದುಕೊಂಡಿರುವುದು ಗೋಚರಿಸಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಟೀಕಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಬಜೆಟ್ ನಲ್ಲಿ ಉಲ್ಲೇಖಿತವಾಗಿರುವ ಪ್ರಗತಿದಾಯಕ ಅಂಶಗಳನ್ನು ತಾರ್ಕಿಕವಾಗಿ ಎದುರಿಸಲು ವಿಫಲವಾದ ವಿಪಕ್ಷ ನಾಯಕರು, ಸದನದ ಅಮೂಲ್ಯ ಸಮಯವನ್ನು ತಾಳಮೇಳವಿಲ್ಲದ ಹೇಳಿಕೆಗಳು ಮತ್ತು ಅಪ್ರಸ್ತುತ ವಿಷಯಗಳೊಂದಿಗೆ ವ್ಯರ್ಥಗೊಳಿಸಿರುವುದು ಸ್ಪಷ್ಟ ಎಂದರು.
17 ಬಾರಿ ಬಜೆಟ್ ಮಂಡಿಸಿದ ಅನುಭವ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಆಡಳಿತ ಸುಗಮವಾಗಿ ಸಾಗುತ್ತಿರುವುದು ಈ ಅಧಿವೇಶನದಿಂದ ಮತ್ತೊಮ್ಮೆ ದೃಢವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ಹಿರಿಯ ಸಚಿವರ ತಂಡ ಸಮರ್ಥ ಆಡಳಿತ ನೀಡುತ್ತಿದೆ. ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ್ದು, ಸಾಮಾಜಿಕ ಸಮಾನತೆ, ದೌರ್ಜನ್ಯ ನಿರ್ಮೂಲನೆ ಮತ್ತು ಜನೋಪಯೋಗಿ ಕ್ರಮಗಳಿಗೆ ಆದ್ಯತೆ ನೀಡಿದೆ. ಪಾರದರ್ಶಕ ಆಡಳಿತಕ್ಕೆ ಪೂರಕವಾದ 11ಕ್ಕೂ ಹೆಚ್ಚು ವಿಧೇಯಕಗಳು ಈ ಅಧಿವೇಶನದಲ್ಲಿ ಅಂಗೀಕಾರಗೊಂಡಿರುವುದು ಗಮನಾರ್ಹ ಸಾಧನೆ.
ಒಟ್ಟಿನಲ್ಲಿ, ಈ ಅಧಿವೇಶನವು, ಆಡಳಿತದ ದಿಕ್ಕು ಸ್ಪಷ್ಟವಾಗಿರುವುದನ್ನು ತೋರಿಸಿದೆ. ಸಮಾನತೆ ಮತ್ತು ಸಮಗ್ರ ಅಭಿವೃದ್ಧಿಯ ಆಶಯವನ್ನು ಮುಂದಿಟ್ಟುಕೊಂಡು ಸಾಗುತ್ತಿರುವ ಕಾಂಗ್ರೆಸ್ ಸರ್ಕಾರ, ರಾಜ್ಯವನ್ನು ಇನ್ನಷ್ಟು ಸುಭಿಕ್ಷಗೊಳಿಸುವ ದಿಕ್ಕಿನಲ್ಲಿ ದೃಢ ಹೆಜ್ಜೆ ಇಡುತ್ತಿದೆ ಎಂದಿದ್ದಾರೆ.
ENGLISH SUMMARY..
Budget Session Highlights: Opposition Falters, Govt Stands Firm
During the recent budget session, the Congress-led Karnataka government presented people-centric schemes effectively in both Houses. The opposition failed to challenge key progressive proposals and instead spent time on uncoordinated and irrelevant issues.
This indirectly underscores that the budget is largely pro-people and free of major flaws. Under Chief Minister Siddaramaiah—who has presented 17 budgets—the administration appeared stable and confident. Deputy CM D. K. Shivakumar and Home Minister G. Parameshwara, along with senior leaders, contributed to steady governance.
The government reaffirmed its commitment to implementing its “five guarantee” schemes and passed over 11 bills promoting social equality, welfare, and transparent governance.
Overall, the session highlighted a clear policy direction and a strong push toward inclusive development.
Key words: Budget session, Government, opposition, failure, H.A. Venkatesh







