2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣದ ಗುರಿ: ಒನ್‌ ನೇಶನ್‌ ಒನ್‌ ರಿಜಿಸ್ಟ್ರೇಷನ್‌ʼ ವ್ಯವಸ್ಥೆ ಜಾರಿಗೆ ಬಜೆಟ್ ನಲ್ಲಿ ಘೋಷಣೆ.

ನವದೆಹಲಿ,ಫೆಬ್ರವರಿ,1,2022(www.justkannada.in): ಅಕ್ರಮ ಆಸ್ತಿ ಖರೀದಿ ಮಾಡುವವರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನಲೆಯಲ್ಲಿ  ʼಒನ್‌ ನೇಶನ್‌ ಒನ್‌ ರಿಜಿಸ್ಟ್ರೇಷನ್‌ʼ ವ್ಯವಸ್ಥೆಯನ್ನು ಜಾರಿ ಮಾಡಲು  ಬಜೆಟ್‌ ನಲ್ಲಿ ಘೋಷಣೆ ಮಾಡಲಾಗಿದೆ.

ಆಸ್ತಿ ನೋಂದಣಿ ಪ್ರಕ್ರಿಯೆ ದೇಶದಾದ್ಯಂತ ಏಕರೂಪದಲ್ಲಿರಲಿದ್ದು, ಡಿಜಿಟಲ್‌ ವ್ಯವಸ್ಥೆಯಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ. ದೇಶದ ಎಂಟು ಭಾಷೆಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯಲಿದೆ.

ಈ ಪ್ರಕ್ರಿಯೆಯಿಂದ ಅಕ್ರಮವಾಗಿ ಆಸ್ತಿ ಖರೀದಿಸುವವರಿಗೆ ಕಡಿವಾಣ ಬೀಳಲಿದೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ. ಇನ್ನು ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ. 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರ ನಿರ್ಧಾರ ಮಾಡಿದೆ. ಉದ್ಯೋಗ ಸೃಷ್ಟಿಯಲ್ಲಿ ಬಂಡವಾಳ ಹೂಡಿಕೆಯಿಂದ ಸಹಾಯ.

ಹಾಗೆಯೇ  2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣದ ಗುರಿ. ಗಡಿ ಪ್ರದೇಶದ ಗ್ರಾಮಗಳ ಅಭಿವೃದ್ಧಿಗೆ ಒತ್ತು. ಮೂಲಸೌಲಭ್ಯ, ಪ್ರವಾಸೋದ್ಯಮ ಕೇಂದ್ರಗಳ ಸ್ಥಾಪನೆ. ಅಂಗನವಾಡಿಗಳಿಗೆ ಆಡಿಯೋ, ವಿಡಿಯೋ ವ್ಯವಸ್ಥೆ, 2 ವರ್ಷದಲ್ಲಿ 5.5 ಕೋಟಿ ಮನೆಗಳಿಗೆ ನೀರು ಪೂರೈಕೆ. 3.8 ಕೋಟಿ ಮನೆಗಳಿಗೆ ನೀರಿನ ವ್ಯವಸ್ಥೆಗೆ ನಿರ್ಧರಿಸಲಾಗಿದೆ.

Key words: Budget-One Nation One Registration- System