ಬಜೆಟ್ ನಲ್ಲಿ ಉತ್ತರ ಎಲ್ಲಿದೆ ಮಿಸ್ಟರ್ ಬಿ.ಎಸ್ ಯಡಿಯೂರಪ್ಪ- ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಶ್ನೆ…

ದಾವಣಗೆರೆ,ಮಾ,8,2020(www.justkannada.in):  ರಾಜ್ಯ ಬಿಜೆಪಿ ಸರ್ಕಾರವನ್ನು ನಾನು ದಾರಿದ್ರ್ಯ ಸರ್ಕಾರ ಎಂದು ನಾನು ಕರೆದಿದ್ದೆ.  ಈ ವೇಳೆ ಇದಕ್ಕೆ ನಾನು ಬಜೆಟ್ ನಲ್ಲಿ ಉತ್ತರ ಕೊಡುತ್ತೇನೆ ಎಂದು ಸಿಎಂ ಬಿಎಸ್ ವೈ ಹೇಳಿದ್ದರು. ಆದರೆ ಬಜೆಟ್ ನಲ್ಲಿ ಎಲ್ಲಿದೆ ಉತ್ತರ ಮಿಸ್ಟರ್ ಬಿಎಸ್ ಯಡಿಯೂರಪ್ಪ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದರು.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,ಲ್ಯಾಣ ಕರ್ನಾಟಕ್ಕೆ 2,500 ಕೋಟಿ ಕೇಳಿದ್ದರು. ಆದರೆ ಸರ್ಕಾರ 1500 ಕೋಟಿ ಮಾತ್ರ ಕೊಟ್ಟಿದೆ. ನಾನು ಸಿಎಂ ಆಗಿದ್ದಾಗಲೇ ಅಷ್ಟು ಹಣ ನೀಡಿದ್ದೆ ಎಂದು ಟೀಕಿಸಿದರು.

ಹಾಗೆಯೇ ಕೃಷ್ಣ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಅನುದಾನ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಬಜೆಟ್ ಮಂಡನೆ ಮರುದಿನ ಕೃಷ್ಣಾ ಮೇಲ್ದಂಡೆ ಯೋಜನೆಗೆ  ಹತ್ತು ಸಾವಿರ ಕೋಟಿ ಘೋಷಿಸಿದ್ದಾರೆ. ಇದು ಸರಿಯಲ್ಲ ಬಜೆಟ್‌ ತನ್ನ ತನ್ನ ಪಾವಿತ್ರ್ಯತೆ ಕಳೆದುಕೊಳ್ಳುತ್ತದೆ  ಎಂದು ಕಿಡಿಕಾರಿದರು.

Key words: budget -Mr. BS Yeddyurappa-Former CM- Siddaramaiah -question