ಸಶಕ್ತ, ಸುಸ್ಥಿರ ಬಜೆಟ್ ಮಂಡನೆ- ಕೆ.ವಿ. ಮಲ್ಲೇಶ್

ಮೈಸೂರು,ಮಾರ್ಚ್,6,2026 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಶಕ್ತ ಹಾಗೂ ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ಒಳಗೊಂಡ ಬಜೆಟ್ ಮಂಡಿಸಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಸ್ವಾಗತಿಸಿದ್ದಾರೆ.

ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್, ಬಜೆಟ್ ಅನ್ನು 11ಜಿ ಮಾದರಿ ಆರ್ಥಿಕತೆಗಳೆಂದು ವ್ಯಾಖ್ಯಾನಿಸಿರುವ ಅವರ ದೂರದೃಷ್ಟಿ ರಾಜ್ಯದ ಅಭಿವೃದ್ಧಿ ಮೇಲೆ ಅವರಿಗಿರು ಕಾಳಜಿಯನ್ನು ತೋರಿಸುತ್ತಿದೆ. ಅದರಲ್ಲೂ ಮೈಸೂರಿಗೆ ಭರ್ಜರಿ ಕೊಡುಗೆಗಳನ್ನೇ ನೀಡಿದ್ದಾರೆ.

ಮೈಸೂರು ನಗರದಲ್ಲಿ ಇ-ಕೋರ್ಟ್’ ಸ್ಥಾಪನೆ, ಮೈಸೂರು ಮೃಗಾಲಯದಲ್ಲಿ ಪ್ರಕೃತಿ ನಿರೂಪಣಾ ಕೇಂದ್ರ ಸ್ಥಾಪನೆ, ಮಾನವ-ವನ್ಯಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡಲು ಅನುದಾನ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಮಗ್ರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ, ಲಿಂಗಾಂಬುಧಿ ಸಸ್ಯ ತೋಟವನ್ನು ಅಭಿವೃದ್ಧಿ, ತಾಡವಪುರದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆಯಂತಹ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದು, ಮೈಸೂರಿನ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದರ ಜತೆಗೆ ಪ್ರಮುಖವಾಗಿ  ಜಯದೇವ ಹೃದ್ರೋಗ ಆಸ್ಪತ್ರೆಯನ್ನು 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ 180 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವುದು ಸ್ವಾಗತಾರ್ಹ. ಕಲ್ಯಾಣ ಹಾಗೂ ಸಮಾನತೆಯ ಹಾದಿಯತ್ತ ಕರ್ನಾಟಕವನ್ನು ಒಯ್ಯಲು ಗ್ಯಾರಂಟಿ ಎಕಾನಮಿ, ಸರ್ವರ ಏಳಿಗೆ ಬಯಸುವ ಸಮರ್ಥ ಸಾರ್ವಜನಿಕ ಶಿಕ್ಷಣಕ್ಕಾಗಿ ಗುಡ್ ಪಬ್ಲಿಕ್ ಎಜುಕೇಷನ್ , ಸಮಗ್ರ ಆರೋಗ್ಯ – ಸದೃಢ ಕರ್ನಾಟಕಕ್ಕಾಗಿ ಗುಡ್ ಹೆಲ್ತ್ ಟು ಆಲ್, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಗ್ರಾಸ್ ರೂಟ್ ಎಕಾನಮಿ,   ಜನಸ್ನೇಹಿ ಆಡಳಿತಕ್ಕಾಗಿ ಗುಡ್ ಗವರ್ನೆನ್ಸ್, ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಗಿಗ್ ಎಕಾನಮಿ,  ಪ್ರಾದೇಶಿಕ ಅಸಮಾನತೆಯ ನಿವಾರಣೆಗಾಗಿ ಜಿಯೋಗ್ರಾಫಿಕಲ್ ಈಕ್ವಾಲಿಟಿ

ವ್ಯಾಪಾರ ಮತ್ತು ಕೈಗಾರಿಕಾಭಿವೃದ್ಧಿಗಾಗಿ ಗ್ಲೋಬಲ್ ಟ್ರೇಡ್ ಎಕಾನಮಿ, ಪ್ರವಾಸೋದ್ಯಮಕ್ಕಾಗಿ ಗ್ಲೋಬ್ ಟ್ರೋಟಿಂಗ್ ಎಕಾನಮಿ, ನವೀಕರಿಸಬಹುದಾದ ಇಂಧನ ಸೇರಿದಂತೆ ಪರಿಸರ ಪೂರಕ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿ ಗ್ರೀನ್ ಎಕಾನಮಿ  ಮತ್ತು ನಗರ ಕೇಂದ್ರಿತ ಸುಸ್ಥಿರ ಆರ್ಥಿಕತೆಗಾಗಿ ಗೋಯಿಂಗ್ ಅರ್ಬನ್ ಎಕಾನಮಿ ಗುರುತಿಸಿ ಅನುದಾನ ಮೀಸಲಿಟ್ಟಿರುವುದು ಅತ್ಯುತ್ತಮ ನಡೆಯಾಗಿದೆ ಎಂದು ಕೆ.ವಿ ಮಲ್ಲೇಶ್ ಬಣ್ಣಿಸಿದ್ದಾರೆ.

Key words: sustainable, budget, Mysore, KV Mallesh