Saturday, September 26, 2026

BDA Apartments

ಅಪರೇಷನ್ ಕಮಲ ಮಾಡಲು ಬಿಎಸ್ ವೈ ಬೇಕಿತ್ತು: ಆದ್ರೆ ಅಧಿಕಾರ ನಡೆಸಲು ಬೇಡ- ಪ್ರಧಾ...
Home Front Page ಅಪರೇಷನ್ ಕಮಲ ಮಾಡಲು ಬಿಎಸ್ ವೈ ಬೇಕಿತ್ತು: ಆದ್ರೆ ಅಧಿಕಾರ ನಡೆಸಲು ಬೇಡ- ಪ್ರಧಾನಿ ಮೋದಿಗೆ...

ಅಪರೇಷನ್ ಕಮಲ ಮಾಡಲು ಬಿಎಸ್ ವೈ ಬೇಕಿತ್ತು: ಆದ್ರೆ ಅಧಿಕಾರ ನಡೆಸಲು ಬೇಡ- ಪ್ರಧಾನಿ ಮೋದಿಗೆ ಡಿ.ಕೆ ಶಿವಕುಮಾರ್ ಟಾಂಗ್.

ಬೆಂಗಳೂರು,ಫೆಬ್ರವರಿ,28,2023(www.justkannada.in):  ನಿನ್ನೆಯ ಸಮಾವೇಶದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಹೊಗಳಿದ ಪ್ರಧಾನಿ ಮೋದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್,  ಮೋದಿ ಕಲಾವಿದರು. ಮೋದಿ ಬಗ್ಗೆ ನಮಗೆ ಅಪಾರ ಗೌರವವಿದೆ. ಬಿಎಸ್  ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಯಾಕೆ ಇಳಿಸಿದ್ರು ಹೇಳಲಿ. ಅರೇಷನ್ ಕಮಲ ಮಾಡಲು ಬಿಎಸ್ ವೈ ಬೇಕಿತ್ತು. ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರಲು ಬಿಎಸ್ ವೈ ಬೇಕು. ಆದರೆ ಅದಿಕಾರ ನಡೆಸಲು ಬೇಡ. ಈಗ ಸರ್ಕಾರದ ಅಭದ್ರತೆ ಕಾಡುತ್ತಿರುವುದರಿಂಧ ಬಿಎಸ್ ವೈ ಹೊಗಳುತ್ತಿದ್ದಾರೆ. ಬಿಎಸ್ ವೈ ನಾಯಕತ್ವದಲ್ಲಿ ಚುನಾವಣೆಗೆ ಹೋಗಲಿ ನೋಡೋಣಾ ಎಂದು ಸವಾಲು ಹಾಕಿದರು.

ವಿಧಾನಸೌಧದಿಂದ ರಾಜಭವನಕ್ಕೆ ಹೋಗುವಾಗ ಕಣ್ಣೀರಿಟ್ಟರು , ಬಿಎಸ್ ವೈಗೆ ಕೊಟ್ಟ ನೋವು ಕಣ್ಣೀರ ಬಗ್ಗೆ  ಉತ್ತರಿಸಿಲಿ. ಅವರ ಕುಟುಂಬದವರ, ಸ್ನೇಹಿತರ ಮನೆ ಮೇಲೆ ಐಟಿ ರೇಡ್ ಆಯಿತು.ಇಡಿ ಅದಿಕಾರಿಗಳು ಸಮನ್ಸ್ ಕೊಟ್ರಲ್ಲ ಅದಕ್ಕೆ ಏನು ಹೇಳಬೇಕು ಎಂದು ಡಿಕೆಶಿ ಪ್ರಶ್ನಿಸಿದರು.

7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಪ್ರತಿಭಟನೆ  ವಿಚಾರ ಯಾರ್ಯಾರು ಏನೇನು ಮತುಕೊಟ್ಟಿದ್ದಾರೆ ನೋಡಿದ್ದೇವೆ . ಏನು ಮಾಡ್ತಾರೆ ನೋಡೋಣ. ಈ ಬಗ್ಗೆ ನಾನು ಮಾತನಾಡಲ್ಲ ಎಂದರು.

Key words: BSY – Operation Kamala-:Not – power-DK Shivakumar- Tong – Modi