ಬಿಎಸ್ ವೈ ಮೈಸೂರಿಗೆ ಬಂದಿದ್ರು: ಆದ್ರೆ ಮೊಟ್ಟೆ ಹೊಡೆಯೋದು ನಮ್ಮ ಕಾಂಗ್ರೆಸ್ ಸಂಸ್ಕೃತಿಯಲ್ಲ- ಡಾ.ಪುಷ್ಪ ಅಮರನಾಥ್ ವಾಗ್ದಾಳಿ.

ಮೈಸೂರು,ಆಗಸ್ಟ್,23,2022(www.justkannada.in):  ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆತ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದ  ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಡಾ.ಪುಷ್ಪ ಅಮರನಾಥ್, ಬಿ.ಎಸ್ ಯಡಿಯೂರಪ್ಪ ನವರು ಇಂದು ಮೈಸೂರಿಗೆ ಬಂದಿದ್ದಾರೆ. ನಾವು ಕೂಡ ಮೊಟ್ಟೆ ಒಡೆಯಬಹುದಿತ್ತು. ಆದರೆ ನಾವು ಅದನ್ನು ಮಾಡೋದಿಲ್ಲ. ಅದು ನಮ್ಮ ಕಾಂಗ್ರೆಸ್ ನ ಸಂಸ್ಕೃತಿಯಲ್ಲ. ಬಿಜೆಪಿ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದೆ. ಕೋಮು ಗಲಭೆಯನ್ನ ಹಬ್ಬಿಸುತ್ತಿದೆ. ನಿಮ್ಮ ಮನೆ ಮಕ್ಕಳನ್ನು ಯಾಕೆ ಕೋಮು ಗಲಭೆಗೆ ಕಳುಹಿಸೋದಿಲ್ಲ. ಬಡ ಮಕ್ಕಳಿಗೆ ಪ್ರಚೋದನೆ ಮಾಡಿ ಅವರ ಜೀವದ ಜೊತೆ ಯಾಕೆ ಚೆಲ್ಲಾಟವಾಡುತ್ತೀರಾ ಎಂದು ಗುಡುಗಿದರು.

ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯ ನವರೇ ಸಾಟಿ. ಸಿದ್ದರಾಮಯ್ಯನವರ ಬಗ್ಗೆ ಮಾತಾಡುವ ಯೋಗ್ಯತೆ ಪ್ರತಾಪ್‌ ಸಿಂಹ ಅವರಿಗಿಲ್ಲ. ಸಿದ್ದರಾಮಯ್ಯ ರಾಜ್ಯದ ದೀನ ದಲಿತರ ಬಡವರ ಹಿಂದುಳಿದವರ ಆಸ್ತಿ. ಸಿದ್ದರಾಮಯ್ಯ ನವರ ಜನಪ್ರಿಯತೆ ಬಿಜೆಪಿಗರ ನಿದ್ದೆಗೆಡಿಸಿದೆ. ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ಸಿದ್ದರಾಮಯ್ಯ ನವರ ತೇಜೋವಧೆ ಮಾಡಲು ಕೀಳು ಮಟ್ಟದ ರಾಜಕೀಯ ಮಾಡ್ತಾ ಇದೆ. ರಣ ಹೇಡಿಗಳು ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಗೆ ನನ್ನ ಧಿಕ್ಕಾರ ಎಂದು ಡಾ. ಪುಷ್ಪ ಅಮರನಾಥ್  ಕಿಡಿಕಾರಿದರು.

Key words: BSY -Mysore: – Congress -culture – Dr. Pushpa Amarnath