ರಾಜ್ಯಕ್ಕೆ ಅಕ್ಕಿ ನೀಡಬೇಡಿ ಎಂದು ಮೋದಿಗೆ ಬಿಎಸ್ ವೈ ದೂರು ನೀಡಿದ್ದರು- ರಣದೀಪ್ ಸಿಂಗ್ ಸುರ್ಜೇವಾಲ ಆರೋಪ.

ಶಿವಮೊಗ್ಗ,ಏಪ್ರಿಲ್,19,2024 (www.justkannada.in): ರಾಜ್ಯಕ್ಕೆ ಅಕ್ಕಿ ನೀಡಬೇಡಿ. ಅಕ್ಕಿ ನೀಡಿದರೇ ರಾಜ್ಯದಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ  ಎಂದು ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ದೂರು ನೀಡಿದ್ದರು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪ ಮಾಡಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 21 ಕ್ಷೇತ್ರಗಳನ್ನ ಗೆಲ್ಲುತ್ತೇವೆ.  ಮೋದಿ ಕಾಂಗ್ರಸ್ ಗ್ಯಾರಂಟಿ ಪದವನ್ನೇ ಕದ್ದುಬಿಟ್ಟಿದ್ದಾರೆ. ಕರ್ನಾಟಕದ ಬಡಜನರಿಗೆ ಮೋದಿ ಅಕ್ಕಿಕೊಡಲಿಲ್ಲ ಅಕ್ಕಿ ಎಫ್ ಸಿಐನಲ್ಲಿ ಕೊಳೆಯುತ್ತಿದ್ದರೂ ಮೋದಿ ಅಕ್ಕಿ ನೀಡಲಿಲ್ಲ. ರಾಜ್ಯಕ್ಕೆ ಅಕ್ಕಿ ನೀಡಬೇಡಿ ಎಂದು ಬಿಎಸ್ ವೈ ಮೋದಿಗೆ ದೂರು ನೀಡಿದ್ದರು. ಅಕ್ಕಿ ನೀಡಿದರೇ ರಾಜ್ಯದಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ ಎಂದಿದ್ದರು. ಹಾಗಾಗಿ 5 ಕೆಜಿ ಅಕ್ಕಿ ಬದಲು ಹಣ ನೀಡುತ್ತಿದ್ದೇವೆ ಎಂದರು.

ಕಾಂಗ್ರೆಸ್ ರಾಜ್ಯದಲ್ಲಿ ಗ್ಯಾರಂಟಿಯನ್ನು ಘೋಷಿಸಿದಾಗ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅಪಹಾಸ್ಯ ಮಾಡಿ ನಕ್ಕಿದ್ದರು. ಕಾಂಗ್ರೆಸ್ ಬಂದರೇ ತಾನೇ ಗ್ಯಾರಂಟಿ ಕೊಡುವುದು ಎಂದು ಲೇವಡಿ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನುಡಿದಂತೆ ನಡೆದಿದ್ದೇವೆ. 6 ತಿಂಗಳ ಒಳಗೆ ಘೋಷಿತ 5 ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಟಾಂಗ್ ನೀಡಿದರು.

Key words: BSY, Modi, rice, Randeep Singh Surjewala