ಹಣ ಕೊಟ್ಟು ಅಧಿಕಾರಕ್ಕೆ ಬಂದ ಬಿಎಸ್ ವೈ  ಜನಪರ ಕೆಲಸ ಮಾಡಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ…

ರಾಯಚೂರು,ನವೆಂಬರ್,23,2020(www.justkannada.in):  ಹಣಕೊಟ್ಟು ಬಿಜೆಪಿಯವರು ಗೆಲುವು ಸಾಧಿಸಿದ್ದಾರೆ. ಹಣ ಕೊಟ್ಟು ಸಿಎಂ ಬಿಎಸ್ ಯಡಿಯೂರಪ್ಪ  ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಅವರು ಈವರೆಗೆ ಜನಪರ ಕೆಲಸಗಳನ್ನ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದರು.kannada-journalist-media-fourth-estate-under-loss

ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಜನರ ಆಶೀರ್ವಾದದಿಂದ ಬಿಜೆಪಿಯವರು ಗೆದ್ದಿಲ್ಲ. ಬಿಎಸ್ ಯಡಿಯೂರಪ್ಪಗೆ ಜನಾಶೀರ್ವಾದ ಇಲ್ಲ. ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಕೆಲಸ ಮಾಡಿಲ್ಲ. ಕೋವಿಡ್ ಸಾಮಗ್ರಿ ಖರೀದಿಯಲ್ಲಿ ಬಿ ಎಸ್ ಯಡಿಯೂರಪ್ಪ ಎರಡು ಸಾವಿರ ಕೋಟಿ ಲಂಚ ಹೊಡೆದಿದ್ದಾರೆ. ಕೋವಿಡ್ ನಿಯಂತ್ರಣ ನೆಪದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.BS yeddyurappa- came - power – money-  job-Former CM -Siddaramaiah -criticized.

ಇದೇ ವೇಳೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧವೂ ಹರಿಹಾಯ್ದ ಸಿದ್ಧರಾಮಯ್ಯ, ಪ್ರತಾಪ್ ಗೌಡ ಪಾಟೀಲ್ ಮಾರಾಟವಾಗಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ಗೆದ್ದು ಕದ್ದು ಓಡಿಹೋಗಿದ್ದಾರೆ. ತುರವಿಹಾಳ ಸಿದ್ಧಾಂತ ಒಪ್ಪಿ  ಕಾಂಗ್ರೆಸ್ ಗೆ ಬಂದಿದ್ದಾರೆ ಎಂದು ಕುಟುಕಿದರು.

Key words: BS yeddyurappa- came – power – money-  job-Former CM -Siddaramaiah -criticized.