ಹೃದಯಾಘಾತಕ್ಕೆ ಅಣ್ಣ- ತಮ್ಮ ಇಬ್ಬರೂ ಬಲಿ

ಯಾದಗಿರಿ,ಸೆಪ್ಟಂಬರ್,2,2025 (www.justkannada.in): ಹೃದಯಾಘಾತಕ್ಕೆ ಅಣ್ಣ ತಮ್ಮ ಇಬ್ಬರೂ ಬಲಿಯಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಸುರಪುರ ತಾಲ್ಲೂಕಿನ ಕೆಂಬಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಗ್ರಾಮದ  ನಿವಾಸಿಗಳಾದ ಅಣ್ಣ ಶಂಶುದ್ದೀನ್‌ (42) ಮತ್ತು ತಮ ಇರ್ಫಾನ್‌ (38) ಮೃತಪಟ್ಟವರು. ನಿನ್ನೆ ಸಂಜೆ ಅಣ್ಣ ಶಂಶುದ್ದೀನ್‌ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ  ಸಾವನ್ನಪ್ಪಿದ್ದಾರೆ.

ಈ ಮಧ್ಯೆ  ಅಣ್ಣನ ಸಾವಿನ ಸುದ್ದಿ  ತಿಳಿದ ತಮ ಇರ್ಫಾನ್‌ ಗೂ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ಒಂದೇ ದಿನ ಇಬ್ಬರು ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Key words: Brothers, die, heart attacks