Tuesday, August 4, 2026

BDA Apartments

Home Front Page BREAKING NEWS : ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹೊರತು ಪಡಿಸಿ ಇಡೀ ಕುಟುಂಬ ಕರೋನಾ...

BREAKING NEWS : ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹೊರತು ಪಡಿಸಿ ಇಡೀ ಕುಟುಂಬ ಕರೋನಾ ಪಾಸಿಟಿವ್..!

 

ಮೈಸೂರು, ಮೇ ೧೫, ೨೦೨೧ (www.justkannada.in): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಡೀ ಕುಟುಂಬ ಕರೋನಾ ಪಾಸಿಟಿವ್. ರೋಹಿಣಿ ಮಾತ್ರ ನೆಗೆಟಿವ್, ಆದರೆ ಮುಂಜಾಗ್ರತೆ ವಹಿಸಿದ ಕಾರಣ ಯಾವುದೇ ಸಮಸ್ಯೆ ಎದುರಾಗಿಲ್ಲ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ತಂದೆ-ತಾಯಿ, ಅತ್ತೆ-ಮಾಮ ಹಾಗೂ ಪತಿ ಎಲ್ಲರಿಗೂ ಕರೋನಾ ಪಾಸಿಟಿವ್ ಧೃಢಪಟ್ಟಿದ್ದು, ಹೋಂ ಐಸೋಲೇಷನ್ ನಲ್ಲಿದ್ದಾರೆ . ಡಿಸಿ ರೋಹಿಣಿ ಸಹ, ಕರೋನಾ ಪರೀಕ್ಷೆಗೆ ಒಳಪಟ್ಟಿದ್ದು ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೂ ಮುಂಜಾಗ್ರತೆ ವಹಿಸಿ, ಕರೋನಾ ನಿಯಮ ಪಾಲಿಸಿದ ಕಾರಣ ಸಮಸ್ಯೆ ಎದುರಾಗಿಲ್ಲ.

jk

ಇಡೀ ಕುಟುಂಬದವರಿಗೆ ಪಾಸಿಟಿವ್ ಬಂದಿದ್ದರು ದೃತಿಗೇಡದ ಡಿಸಿ ರೋಹಿಣಿ ಸಿಂಧೂರಿ, ಸಾರ್ವಜನಿಕರಿಗೆ ಒಂದಷ್ಟು ಮುಂಜಾಗ್ರತೆಯ ಟಿಪ್ಸ್ ನೀಡಿದ್ದಾರೆ.

ಕೊರೊನ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು ಇದು ನಿಯಂತ್ರಣಕ್ಕೆ ಬರಲು ಇನ್ನೂ ಹಲವಾರು ವಾರಗಳೇ ಬೇಕು ಎಂದನಿಸುತ್ತದೆ. ಈ ನಡುವೆ ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಎಲ್ಲಿಯೂ ಆಸ್ಪತ್ರೆಗಳಲ್ಲಿ ಬೆಡ್‌ಗಳಾಗಲೀ, ಚಿಕಿತ್ಸೆಯಾಗಲೀ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ, ಜನರ ಅನುಕೂಲಕ್ಕಾಗಿ ಹಲವು ಆಸ್ಪತ್ರೆಗಳು ಆನ್‌ಲೈನ್ ಕೌನ್ಸೆಲಿಂಗ್ ಹಾಗೂ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವ ಪದ್ಧತಿಯನ್ನು ಆರಂಭಿಸಿವೆ. ನಿಮಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿನ ಲಘು ಸೂಚನೆಗಳಿದ್ದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು. ಸೋಂಕು ಕಾಣಿಸಿಕೊಂಡ ಮೊದಲ 5 ದಿನ ಪ್ರಮುಖವಾದದ್ದು. ಈ ವೇಳೆ ಸೂಕ್ತ ಔಷಧವನ್ನು ನಿಯಮಿತವಾಗಿ ಸೇವಿಸುವುದು ಅತ್ಯವಶ್ಯಕ.

ಹೋಂ ಐಸೋಲೇಷನ್‌ನಲ್ಲಿರುವ ಕೋವಿಡ್ ಸೋಂಕಿತರಿಗೆ ತಜ್ಞರು ಶಿಫಾರಸ್ಸು ಮಾಡಿರುವ ಚಿಕಿತ್ಸಾ ಮಾರ್ಗಸೂಚಿಗಳು ಇಂತಿವೆ….

mysore-DC-rohini-sindhoori-family-corona-posotive

ಈ ಎಲ್ಲಾ ಔಷಧಗಳನ್ನು ಆನ್‌ಲೈನ್ ಅಥವಾ ವೈದ್ಯರ ನೇರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳುವುದು. ಒಂದು ವೇಳೆ ಈ ಔಷಧಗಳನ್ನು ತೆಗೆದುಕೊಳ್ಳುವಾಗ ಸೋಂಕಿನ ಸೂಚನೆಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದನಿಸಿದರೆ ಕೂಡಲೇ ನಿಮ್ಮ ವೈದ್ಯರ ಸಲಹೆ ಪಡೆಯಿರಿ.
ಇವುಗಳ ಜೊತೆಗೆ ಸೋಂಕಿತರು ದಿನಕ್ಕೆ ಮೂರು ಬಾರಿ ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು ಹಾಗೂ ಬಿಸಿ ನೀರಿಗೆ ಉಪ್ಪು ಬೆರೆಸಿ ಗಾರ್ಗಲ್ ಮಾಡುವುದು ನೆರವಾಗುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಲಹೆ ನೀಡಿದ್ದಾರೆ.

mysore-DC-rohini-sindhoori-family-corona-posotive

key words : mysore-DC-rohini-sindhoori-family-corona-posotive