Friday, October 16, 2026

Dasara Wishes

Happy Dasara
Home Front Page ಅಂಬೇಡ್ಕರ್  ಭಾವಚಿತ್ರಕ್ಕೆ ಅಪಮಾನ: ನ್ಯಾಯಾಧೀಶರನ್ನ ವಜಾಗೊಳಿಸುವಂತೆ ಕೆ.ಎಸ್ ಶಿವರಾಮ್ ಆಗ್ರಹ.

ಅಂಬೇಡ್ಕರ್  ಭಾವಚಿತ್ರಕ್ಕೆ ಅಪಮಾನ: ನ್ಯಾಯಾಧೀಶರನ್ನ ವಜಾಗೊಳಿಸುವಂತೆ ಕೆ.ಎಸ್ ಶಿವರಾಮ್ ಆಗ್ರಹ.

ಮೈಸೂರು,ಜನವರಿ,27,2022(www.justkannada.in):  ಅಂಬೇಡ್ಕರ್ ಪೋಟೋ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವೆ ಎಂಬ ರಾಯಚೂರು ನ್ಯಾಯಾಧೀಶರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ‌ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್  ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿದ ಕೆ.ಎಸ್ ಶಿವರಾಮ್, ನ್ಯಾಯಾಧೀಶರ ನೇಮಕದಲ್ಲಿ ಮೀಸಲಾತಿ ತರಬೇಕು. ಕೂಡಲೇ ಈ ನ್ಯಾಯಾಧೀಶರನ್ನು ವಜಾ ಮಾಡಬೇಕು. ನಾವು ಇದರ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತೇವೆ. ಪಟ್ಟಭದ್ರ ಹಿತಾಶಕ್ತಿಗಳು ಸಂವಿಧಾನವನ್ನು ನಾಶ ಮಾಡಲು ಮುಂದಾಗಿವೆ. ಇದಕ್ಕಾಗಿ ನ್ಯಾಯಾಧೀಶರನ್ನು‌ ಬಳಸಿಕೊಳ್ಳುತ್ತಿದ್ದಾರೆ.

ಇದರ ಹಿಂದೆ ಯಾರದ್ದೋ ಹುನ್ನಾರ ಇದೆ. ಆರ್ ಎಸ್ ಎಸ್, ಭಜರಂಗ ದಳದ ಕೈವಾಡ ವಿದೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಕೆ.ಎಸ್ ಶಿವರಾಮ್ ಆಗ್ರಹಿಸಿದ್ದಾರೆ.

Key words: BR Ambedkar-KS Shivaram – judge.