ಪರಿಹಾರ ಕೇಂದ್ರದಲ್ಲಿ ಜ್ವರದಿಂದ ಮೃತಪಟ್ಟ ಬಾಲಕ: ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ…

ಬೆಳಗಾವಿ,ಸೆ,10,2019(www.justkannada.in): ಪರಿಹಾರಕೇಂದ್ರದಲ್ಲಿ ಬಾಲಕನೋರ್ವ ಜ್ವರದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಸುರೇಬಾನ್ ಪರಿಹಾರ ಕೇಂದ್ರದಲ್ಲಿ ನಡೆದಿದೆ.

ಬಾಲಕ ಜ್ವರದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು ಮೃತಬಾಲಕನ ಕುಟುಂಬಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, ಬಾಲಕ ಯಾವ ಕಾರಣಕ್ಕೆ ಸಾವನ್ನಪ್ಪಿದ್ದಾನೆ ಎಂಬುದು ಗೊತ್ತಿಲ್ಲ. ಇಂದು ಪರಿಹಾರ ಕೇಂದ್ರಕ್ಕೆ ಭೇಟಿ ನೀಡುತ್ತೇನೆ. ಬಾಲಕನ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words:  boy -died -fever -relief center- 5 lakh- compensation -declaration -belagavi