ಗಡಿ ವಿವಾದ: ಮುಂದಿನ 48 ಗಂಟೆಗಳಲ್ಲಿ ಪ್ರಕರಣ ಬಗೆಹರಿಸದಿದ್ದರೇ ನಾನೇ ಬೆಳಗಾವಿಗೆ ಹೋಗ್ತೇನೆ ಎಂದ ಎನ್​ ಸಿಪಿ ನಾಯಕ ಶರದ್ ಪವಾರ್

ಮುಂಬೈ ,ಡಿಸೆಂಬರ್,6,2022(www.justkannada.in):  ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಕ್ಯಾತೆ ಹಿನ್ನೆಲೆ  ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮಹಾರಾಷ್ಟ್ರ ಲಾರಿಗಳಿಗೆ ಮಸಿ ಬಳಿದು ಕಲ್ಲು ತೂರಾಟ ನಡೆಸಿದ್ದಕ್ಕೆ ಎನ್​ಸಿಪಿ ನಾಯಕ ಶರದ್ ಪವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡಿ ವಿವಾದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಶರದ್ ಪವಾರ್,  “ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಸರ್ಕಾರ ಈ ಪ್ರಕರಣವನ್ನ ಬಗೆಹರಿಸಬೇಕು. ಇಲ್ಲವಾದರೇ, ನಾನೇ ಬೆಳಗಾವಿಗೆ ಹೋಗುತ್ತೇನೆ” ಎಂದಿದ್ದಾರೆ.

ಕರ್ನಾಟಕ ಸಿಎಂ ಹೇಳಿಕೆಯಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿ ವಿಚಾರವಾಗಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಮುಂದಿನ 24 ಗಂಟೆಯಲ್ಲಿ ಶಾಂತ ವಾತಾವರಣ ನಿರ್ಮಾಣ ಮಾಡಿ. ಇಲ್ಲದಿದ್ದರೆ ನಾವೂ ತಾಳ್ಮೆ ಕಳೆದುಕೊಳ್ಳುತ್ತೇವೆ ಎಂದು  ಸಿಎಂ ಬೊಮ್ಮಾಯಿಗೆ ಶರದ್ ಪವಾರ್  ತಿಳಿಸಿದ್ದಾರೆ.

Key words: Border -dispute-NCP leader -Sharad Pawar – Belgaum – resolved – next 48 hours