ಮಂಗಳೂರಿನಿಂದ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ…

ಬೆಂಗಳೂರು,ಜ,20,2020(www.justkannada.in):  ಮಂಗಳೂರಿನ ಏರ್ ಪೋರ್ಟ್ ನಲ್ಲಿ ಬ್ಯಾಗ್ ವೊಂದರಲ್ಲಿ ಬಾಂಬ್ ಪತ್ತೆಯಾಗಿ ಅದನ್ನ ನಿಷ್ಕ್ರಿಯಗೊಳಿಸಲು ಕೆಂಜಾರು ಮೈದಾನಕ್ಕೆ ಸ್ಥಳಾಂತರಿಸಲಾಗಿದ್ದು, ಈ ಬೆನ್ನಲ್ಲೆ ಇದೀಗ ಮಂಗಳೂರಿನಿಂದ ತೆರಳುತ್ತಿದ್ದ ವಿಮಾನವೊಂದಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.

ಮಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಇಂಡಿಗೋ ವಿಮಾನಯಾನ ಸಂಸ್ಥೆಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಲಾಗಿದೆ. ಇನ್ನು ವಿಮಾನವನ್ನ ವಾಪಸ್ ಕರೆಸಿ ವಿಮಾನದಲ್ಲಿದ್ದ 126 ಪ್ರಯಾಣಿಕರನ್ನ ಕೆಳಗೆ ಇಳಿಸಿ ತಪಾಸಣೆ  ಮಾಡಲಾಗುತ್ತಿದೆ.

Key words: Bomb –threatened- flight – Mangalore