ಮೈಸೂರು,ಜನವರಿ,6,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ನ್ಯಾಯಾಧೀಶರು, ನ್ಯಾಯವಾದಿಗಳು, ಕಕ್ಷಿದಾರರು ಭಯಭೀತರಾಗಿ ಹೊರಕ್ಕೆ ಓಡಿಬಂದ ಘಟನೆ ನಡೆದಿದೆ.
ಮೈಸೂರಿನ ಎರಡೂ ನ್ಯಾಯಲಯಗಳನ್ನ ಸ್ಫೋಟಿಸುವ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೋರ್ಟ್ ಆವರಣದೊಳಗೆ ಬಾಂಬ್ ನಿಷ್ಕ್ರಿಯ ದಳದಿಂದ ಪರಶೀಲನೆ ನಡೆಸಲಾಗುತ್ತಿದೆ.
ಈ ಹಿಂದೆ ಆಗಸ್ಟ್ 1, 2016ರಂದು ಮೈಸೂರು ಜಿಲ್ಲಾ ನ್ಯಾಯಾಲಯದ ಹಿಂಬದಿಯ ಶೌಚಾಲಯದಲ್ಲಿ ಸ್ಫೋಟ ಸಂಭವಿಸಿತು. ಉಗ್ರರು ಮೈಸೂರು ಕೋರ್ಟ್ ನಲ್ಲಿ ಕುಕ್ಕರ್ ಬಾಂಬ್ ಇರಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸಿದ್ದು, ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಂಬ್ ಸ್ಫೋಟಿಸಿದ ಆರೋಪದಡಿ ಅಲ್-ಖೈದಾ ಉಗ್ರರಾದ ಕರೀಮ್, ಆಯುಫ್ ಮತ್ತು ಅಬ್ಬಾಸ್ ಅಲಿ ಎಂಬುವವರನ್ನು ಬಂಧಿಸಿತ್ತು. ತಮಿಳುನಾಡು ಮೂಲದ ಈ ಮೂವರು ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಲ್ ಖೈದಾ ಸಂಘಟನೆ ದಾಳಿ ಹೊಣೆ ಹೊತ್ತಿತ್ತು. ಇದೀಗ ಮತ್ತದೇ ಕೋರ್ಟ್ ಸ್ಫೋಟಿಸುವುದಾಗಿ ಬೆದರಿಕೆ ಬಂದಿದೆ.
Key words: Bomb threat, Mysore Court, Anxiety







