ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ: ತಪಾಸಣೆ

ಚಾಮರಾಜನಗರ,ಮೇ,2,2025 (www.justkannada.in): ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸ್ಪೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಬಂದದೆ.

ಬಾಂಬ್ ಬೆದರಿಕೆ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾಹಿತಿ ನೀಡಿದರು.  ಮಧ್ಯಾಹ್ನ 3:10 ಗಂಟೆಗೆ ಬಾಂಬ್ ಸ್ಪೋಟಿಸುವುದಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಖಾಸಗಿ ಏಜೆನ್ಸಿ ಮೂಲಕ ಇ-ಮೇಲ್ ಬಂದಿದ್ದು, ಜಿಲ್ಲಾಡಳಿತ ಎಲ್ಲಾ ಕಚೇರಿಯ ಅಧಿಕಾರಿ ಹಾಗೂ ನೌಕರ ಸಿಬ್ಬಂದಿಗಳಲ್ಲಿ ಆತಂಕ ಉಂಟಾಗಿತ್ತು.

ಇಂದು ಬೆಳಿಗ್ಗೆ 7:10ಕ್ಕೆ ಖಾಸಗಿ ಏಜೆನ್ಸಿ ಇ-ಮೇಲ್ ಮೂಲಕ ಜಿಲ್ಲಾ ಆಡಳಿತ ಭವನಕ್ಕೆ ಬಾಂಬ್ ಇಟ್ಟಿರುವದಾಗಿ ಮೇಲ್ ಬಂದಿದ್ದು, ಅದು 3:10 ಗಂಟೆಗೆ ಸ್ಪೋಟಗೊಳ್ಳುವುದೆಂದು ತಿಳಿದು ಬಂದಿದೆ ಎಂದ ಡಿಸಿ ಶಿಲ್ಪಾ ನಾಗ್ ಮಾಹಿತಿ ನೀಡಿದರು.

ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಬಾಂಬ್ ನಿಷ್ಕ್ರಿಯ ದಳಗಳನ್ನು ಕರೆಸಿ ತನಿಖೆ ಮಾಡಲಾಗುತ್ತಿದೆ. ಈ ಮಾಹಿತಿ ಹುಸಿ ಅಥವಾ ನಿಜವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.  ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳನ್ನ ಕಚೇರಿಯಿಂದ ಹೊರಗೆ ಕಳುಹಿಸಿ ಜಿಲ್ಲಾಡಳಿತ ಭವನ ಬಂದ್ ಮಾಡಲಾಗಿತ್ತು.

ಕಚೇರಿಯ ಸುತ್ತಮುತ್ತಲು ಬಾಂಬ್ ಇಟ್ಟಿರುವ ಬಗ್ಗೆ ಪರಿಶೀಲನೆ ನಡೆಸಿದ್ದು,  ಸ್ಥಳದಲ್ಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ  ಸೇರಿದಂತೆ ಮತ್ತಿತರ ಅಧಿಕಾರಿಗಳು ಬಿಡು ಬಿಟ್ಟದ್ದರು.

Key words: Bomb threat, Chamarajanagar District Administration, Building,