ನವದೆಹಲಿ, ನವೆಂಬರ್, 18,2025 (www.justkannada.in): ದೆಹಲಿಯ ಕೆಂಪುಕೋಟೆ ಬಳಿ ಇತ್ತೀಚೆಗೆ ಕಾರುಸ್ಪೋಟ ದುರ್ಘಟನೆಯಲ್ಲಿ ಹಲವು ಮಂದಿ ಸಾವನ್ನಪ್ಪಿದ ಘಟನೆ ಸಾಕಷ್ಟು ಬೆಚ್ಚಿ ಬೀಳಿಸಿತ್ತು. ಇದೀಗ ದೆಹಲಿಯ ಕೆಳ ನ್ಯಾಯಾಲಯಗಳು ಹಾಗೂ ಸಿಆರ್ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ(Bomb Threat) ಕರೆ ಇ- ಮೇಲ್ ಬಂದಿದೆ.
ನಗರದ ಎರಡು ಸಿಆರ್ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ದ್ವಾರಕಾದ ಸಿಆರ್ಪಿಎಫ್ ಶಾಲೆ ಮತ್ತು ಪ್ರಶಾಂತ್ ವಿಹಾರ್ನಲ್ಲಿರುವ ಮತ್ತೊಂದು ಸಿಆರ್ಪಿಎಫ್ ಶಾಲೆಗೆ ಎಚ್ಚರಿಕೆ ನೀಡಲಾಗಿದ್ದು, ಪೊಲೀಸ್ ತಂಡಗಳು ತ್ವರಿತ ಕ್ರಮ ಕೈಗೊಂಡು ಕ್ಯಾಂಪಸ್ನಲ್ಲಿ ಪರಿಶೀಲನೆ ನಡೆಸಿವೆ.
ಸಾಕೇತ್ ನ್ಯಾಯಾಲಯ, ಪಟಿಯಾಲ ಹೌಸ್ ನ್ಯಾಯಾಲಯ, ತೀಸ್ ಹಜಾರಿ ನ್ಯಾಯಾಲಯ ಮತ್ತು ಇತರ ಹಲವಾರು ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಬಾಂಬ್ ಬೆದರಿಕೆ ಇ-ಮೇಲ್ ಬಂದ ಕೂಡಲೇ ವಕೀಲರು ಹಾಗೂ ಸಾರ್ವಜನಿಕರನ್ನು ನ್ಯಾಯಾಲಯದಿಂದ ಹೊರಗೆ ಕಳುಹಿಸಿ ಪೊಲೀಸರು ತಪಾಸಣೆ ಕಾರ್ಯ ನಡೆಸಿದ್ದಾರೆ. ಜೈಶ್ ಎ ಮಹಮದ್ ಸಂಘಟನೆ ಹೆಸರಲ್ಲಿ ಬಾಂಬ್ ಬೆದರಿಕೆ ಮೇಲ್ ಬಂದಿದೆ ಎನ್ನಲಾಗಿದೆ.
Key words: Bomb threat, court, CRPF school ,Delhi







