ಆದಿತ್ಯ ಒಬ್ಬನೇ ಸ್ಪೋಟಕ್ಕೆ ಸಂಚು ರೂಪಿಸಿದ್ದ: ಆತನ ಜತೆ ಯಾರೂ ಕೈಜೋಡಿಸಿಲ್ಲ-ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷ ಹೇಳಿಕೆ

ಮಂಗಳೂರು,ಜ,23,2020(www.justkannada.in):  ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್ ಒಬ್ಬನೇ ಸ್ಪೋಟಕ್ಕೆ ಸಂಚು ರೂಪಿಸಿದ್ದ. ಆತನ ಜತೆ ಯಾರೂ ಕೈ ಜೋಡಿಸಿರಲಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷ ತಿಳಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷಾ, ಪ್ರಕರಣ ಸಂಬಂಧ ನಿನ್ನೆ ಬೆಂಗಳೂರಿಗೆ ಹೋಗಿ ಆರೋಪಿ ಆದಿತ್ಯರಾವ್ ಶರಣಾಗಿದ್ದಾನೆ. ನಮ್ಮ ಬಳಿ ಇದ್ದ ಸಿಸಿ ಟಿವಿ ಫೋಟೊ ಪರಿಶೀಲನೆ ಬಳಿಕ ಆತನೇ ಆರೋಪಿ ಎಂದು ದೃಢಪಟ್ಟಿದೆ. ಹೀಗಾಗಿ ಕೋರ್ಟ್ ಹಾಜರುಪಡಿಸಲಾಗಿತ್ತು. ಟ್ರಾನ್ಸಿಟ್ ವಾರೆಂಟ್ ಮೂಲಕ ನಮ್ಮ ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.

ಆತ ಮೈಸೂರಿನಲ್ಲಿ ಇಂಜಿನಿಯರಿಂಗ್ ಎಂಬಿಎ ಮಾಡಿದ್ದಾನೆ.  ತನ್ನ ಘನತೆಗೆ ತಕ್ಕ ಕೆಲಸ ಸಿಗಲಿಲ್ಲ ಎಂಬ ಭಾವನೆ ಆತನಲ್ಲಿ ಇತ್ತು. ಆತ ವಿವಿಧ ಬ್ಯಾಂಕ್ ಗಳಲ್ಲಿ ವಿವಿಧ  ಕೆಲಸ ಮಾಡಿದ್ದ. ಕಚೇರಿಯ ಒಳಗೆ ಆತನಿಗೆ ಕೆಲಸ ಮಾಡಲು ಇಷ್ಟವಿರಲಿಲ್ಲ. ತನ್ನ ಅನುಭವ ಪತ್ರವನ್ನ ತಿದ್ದು ವಿವಿಧ ಕಡೆಗಳಲ್ಲಿ ಕೆಲಸಕ್ಕೆ ಸೇರುತ್ತಿದ್ದ. ಈ ನಡುವೆ ಆತನಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಆಸಕ್ತಿ ಇತ್ತು. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಕೆಲಸ ಕೇಳಿ ಕೊಂಡು ಹೋಗಿದ್ದನು ಆದರೆ ಅಫಿಡೆವಿಟ್ ಮಾಡಿಸಿಕೊಂಡು ಬರಲು ಸೂಚಿಸಿದ್ದರು.ನಂತರ ಆತ ಉಡುಪಿಗೆ ಬಂದು ಅಫಿಡೆವಿಟ್ ಮಾಡಿಸಿಕೊಂಡು ಬರುವ ವೇಳೆಗೆ ಬೇರೆಯವರು ಅಲ್ಲಿ ಕೆಲಸಕ್ಕೆ ಸೇರಿದ್ದರು ಎಂದು ಹರ್ಷಾ ಅವರು ಮಾಹಿತಿ ನೀಡಿದರು.

Key words: bomb- accused-Aditya rao-  No one – joined -Mangalore Police Commissioner -Dr. Harsha