ಮೈಸೂರಿಗೆ ಭೇಟಿ: ವಿಶೇಷ ಮಕ್ಕಳೊಂದಿಗೆ ಸಂತಸದ ಕ್ಷಣ ಹಂಚಿಕೊಂಡ ಬಾಲಿವುಡ್ ನಟ

ಮೈಸೂರು,ಜುಲೈ,15,2025 (www.justkannada.in): ಬಾಲಿವುಡ್ ನಟ ಗುರುಪಾಲ್ ಸಿಂಗ್ ಅವರು ಇಂದು ಅಣುವ್ರತ ಸಮಿತಿ ಮೈಸೂರಿನ ತಂಡದೊಂದಿಗೆ ಮೈಸೂರಿನ ಐದು ಶಾಲೆಗಳಿಗೆ ಭೇಟಿ ನೀಡಿ ವಿಶೇಷ ಮಕ್ಕಳೊಂದಿಗೆ ಸಂತಸದ ಕ್ಷಣ ಹಂಚಿಕೊಂಡರು.

ಅಣುವ್ರತ ಸಮಿತಿ ಮೈಸೂರು ವತಿಯಿಂದ ಸ್ಪರ್ಶನೀಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.   ಸಿತಾರೆ ಜಮೀನ್ ಪರ್ ಚಿತ್ರದ ವಿಶೇಷ ಪ್ರದರ್ಶನ ಕಾರ್ಯಕ್ರಮದಲ್ಲಿ  200ಕ್ಕಿಂತ ಹೆಚ್ಚು ವಿಶೇಷ ಮಕ್ಕಳ ಜೊತೆಗೆ 400ಕ್ಕೂ ಹೆಚ್ಚು ಪೋಷಕರು, ಶಿಕ್ಷಕರು ಮತ್ತು ಸ್ವಯಂಸೇವಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ವಿಡಿಯೋವನ್ನು ಗುರ್ಪಾಲ್ ಸಿಂಗ್ ಅವರಿಗೆ ಕಳುಹಿಸಲಾಗಿತ್ತು. ಇದೀಗ ಇಂದು  ಗುರುಪಾಲ್ ಸಿಂಗ್ ಅವರು ಮೈಸೂರಿಗೆ ಆಗಮಿಸಿ ಅಣುವ್ರತ ಸಮಿತಿ  ತಂಡದೊಂದಿಗೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂತಸದ ಕ್ಷಣ ಹಂಚಿಕೊಂಡರು.

ಜೆಎಸ್‌ಎಸ್ ಸಹಾನಾ ಶಾಲೆ, ನಿರೀಕ್ಷೆ ಸ್ಪೆಷಲ್ ಶಾಲೆ, ಗ್ರೇಸ್ ಸ್ಪೆಷಲ್ ಶಾಲೆ, ವಿಸ್ಡಮ್ ಸ್ಪೆಷಲ್ ಶಾಲೆ ಹಾಗೂ ಎಂ ಜೆ ಸೂಫಿ ಶಾಲೆಗಳಿಗೆ ಗುರ್ಪಾಲ್ ಸಿಂ ಭೇಟಿ ನೀಡಿದ್ದು,  ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲಾ ಶಾಲೆಗಳಲ್ಲಿಯೂ ಶಮರಗಿಡ ನೆಡುವ  ಮೂಲಕ ಪರಿಸರ ಜಾಗೃತಿ  ಮೂಡಿಸಲಾಯಿತು.vtu

Key words: Visit, Mysore,  schools,  Bollywood actor