ಬಾಲಿವುಡ್ ನಟ ಆದಿತ್ಯ ಪಾಂಚೊಲಿ ವಿರುದ್ಧ ಅತ್ಯಾಚಾರ, ಹಲ್ಲೆ ಪ್ರಕರಣ ದಾಖಲು

ಮುಂಬೈ:ಜೂ-28:(www.justkannada.in) ಬಾಲಿವುಡ್ ಖಳನಟ ಆದಿತ್ಯ ಪಂಚೊಲಿ ವಿರುದ್ಧ ಸ್ಟಾರ್ ನಟಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದು, ನಟನ ವಿರುದ್ಧ ಮುಂಬೈ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಆದರೆ ಇದೊಂದು ಸುಳ್ಳು ಆರೋಪವಾಗಿದ್ದು, ಕಾನೂನು ಹೋರಾಟ ನಡೆಸುವುದಾಗಿ ಪಾಂಚೊಲಿ ತಿಳಿಸಿದ್ದಾರೆ.

36 ವರ್ಷದ ನಟಿಯೊಬ್ಬರ ಮೇಲೆ 2004 ಹಾಗೂ 2009 ರ ನಡುವಿನ ಅವಧಿಯಲ್ಲಿ ಆದಿತ್ಯ ಪಂಚೊಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ ಈ ಅವಧಿಯಲ್ಲಿ ಪೊಲೀಸರಿಗೆ ದೂರು ನೀಡಲು ಆಕೆ ಪ್ರಯತ್ನಿಸಿದಾಗ ಪಂಚೊಲಿ ಹಲ್ಲೆ ನಡೆಸಿದ್ದಾರೆ ಎಂದು ಕೂಡ ಉಲ್ಲೇಖ ಮಾಡಿರುವುದಾಗಿ ಪೊಲೀಸ್ ವಕ್ತಾರ ಡಿಸಿಪಿ ಮಂಜುನಾಥ್ ಸಿಂಗ್ಟೆ ತಿಳಿಸಿದ್ದಾರೆ.

ಖಾಸಗಿ ಪೋಟೋಗಳನ್ನು ಸಂತ್ರಸ್ತ ಮಹಿಳೆಯ ಕುಟುಂಬಸ್ಥರು ಹಾಗೂ ಗೆಳೆಯರಿಗೆ ತೋರಿಸದಿರಲು 1 ಕೋಟಿ ನೀಡುವಂತೆ ಪಂಚೊಲಿ ಬೇಡಿಕೆ ಇಟ್ಟಿದ್ದು, ಆಕೆಯಿಂದ 50 ಲಕ್ಷ ರೂಪಾಯಿ ಹಣ ಕೂಡ ದೋಚಿದ್ದಾಗಿ ಆರೋಪಿಸಿದ್ದಾರೆ.

ಈ ಹಿನ್ನಲೆಯಲ್ಲಿ ಆದಿತ್ಯ ಪಾಂಚೊಲಿ ವಿರುದ್ಧ ಐಪಿಸಿ ಸೆಕ್ಷನ್ 376( ಅತ್ಯಾಚಾರ) 323 ( ಹಲ್ಲೆ ) 328 ಮತ್ತು 384 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಚೊಲಿ, ಇದು ತಮ್ಮ ವಿರುದ್ಧ ಮಾಡಿರುವ ಪಿತೂರಿ ಆಗಿದ್ದು, ಅವರ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಬಾಲಿವುಡ್ ನಟ ಆದಿತ್ಯ ಪಾಂಚೊಲಿ ವಿರುದ್ಧ ಅತ್ಯಾಚಾರ, ಹಲ್ಲೆ ಪ್ರಕರಣ ದಾಖಲು
Bollywood actor Aditya Pancholi Booked in 10-year-old Rape Case by Mumbai Police