ಬೆಂಗಳೂರು,ಜನವರಿ, 8,2024(www.justkannada.in): : ಬಿಎಂಟಿಸಿ ಎಂಡಿ ಸತ್ಯವತಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಾಗೆಯೇ ಬಿಎಂಟಿಸಿ ಎಂಡಿಯಾಗಿ ಐಎಎಸ್ ಅಧಿಕಾರಿ ರಾಮಚಂದ್ರನ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಸತ್ಯವತಿ ಅವರ ವಿರುದ್ಧ ಸಾರಿಗೆ ಸಚಿವರಿಗೆ ಸಾಕಷ್ಟು ದೂರು ಬಂದಿತ್ತು. ಹೀಗಾಗಿ ಜಿ.ಸತ್ಯವತಿರನ್ನು ವರ್ಗಾವಣೆ ಮಾಡುವಂತೆ ಸಚಿವರಿಗೆ ಕೆಎಸ್ ಆರ್‌ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಮನವಿ ಮಾಡಿತ್ತು. ಈ ಆಧಾರದ ಮೇಲೆ ರಾಜ್ಯ ಸರ್ಕಾರ ಸತ್ಯವತಿ ಅವರಿಗೆ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸರ್ಕಾರ ಬಿಎಂಟಿಸಿಯ ನೂತನ ಎಂಡಿಯಾಗಿ ರಾಮಚಂದ್ರನ್ ಆರ್ ಅವರು ನೇಮಕವಾಗಿದ್ದಾರೆ. ಈ ಹಿಂದೆ ಬಿಬಿಎಂಪಿ ಸ್ಪೆಷಲ್ ಕಮೀಷನರ್ (ಚುನಾವಣಾ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
Key words: BMTC –MD- Satyavathi- Transfer – Ramachandran -Appointed






